ಸೈದಾಪುರ:ಇಫ್ತಿಯಾರ ಕೂಟ

ಸೈದಾಪುರ:ಎ.21:ಪಟ್ಟಣದ ಮುಸ್ಲಿಂ ಭಾಂದವರಿಗೆ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರಿಗೆ ಬಸವಂತರಾಯ ಪೊಲೀಸ ಪಾಟೀಲ ಇಫ್ತಿಯಾರ ಕೂಟ ನೆರವೇರಿಸಿದರು.

ವರ್ಷದ 12 ತಿಂಗಳಲ್ಲಿ ಮುಸಲ್ಮಾನರಿಗೆ ಅತೀವ ಪವಿತ್ರ ಮಾಸವೆಂದರೆ ರಂಜಾನ ತಿಂಗಳಾಗಿದೆ. ಅಲ್ಲಾನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗ ಇದಾಗಿದೆ. ಬಸವಂತಾಯ ಪಾಟೀಲರು ಈ ವರ್ಷವೂ ಇಫ್ತಿಯಾರ ಕೂಟ ಆಯೋಜನೆ ಮಾಡುವುದರ ಮೂಲಕ ಹಬ್ಬಕ್ಕೆ ಶುಭ ಹಾರೈಸಿದ್ದಾರೆ ಎಂದು ಮುಸ್ಲಿಂ ಬಂದುಗಳು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಹಫೀಜ ಶೈಖ, ಅಲ್ಲಾಭಾಷಾ ಹಿಚ್ಗೇರಿ, ಮುಸ್ತಾಕ, ಇಮ್ತಿಯಾಜ ಮೌಲಾ, ಶೈಖ ನಿಜಾಮ, ಮೈನೋದ್ದಿನ್ ಬದ್ದೇಪಲ್ಲಿ ಸೇರಿದಂತೆ ಇತರರಿದ್ದರು.