ಸೈದಾಪುರ:ಅತಿಕ್ರಮಿಸಿಕೊಂಡ ಸ್ಥಳ ತೆರವು ಮಾಡಿದ ಗ್ರಾ.ಪಂಚಾಯತ

ಸೈದಾಪುರ:ಎ.25:ಪಟ್ಟಣದಲ್ಲಿ ಕೊರೊನ ನಿಯಮವನ್ನು ಕಟ್ಟು ನಿಟ್ಟಾಗಿ ಅಸ್ಥಿತ್ವಕ್ಕೆ ತರುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ ಇಲಾಖೆ ವತಿಯಿಂದ ಜನ ನಿಬಿಡತೆ ಇರುವ ಪ್ರದೇಶಗಳಲ್ಲಿ ಅಕ್ರಮವಾಗಿ ರಸ್ತೆ ಸಂಚಾರಕ್ಕೆ ತೊಂದತೆಯನ್ನುಂಟು ಮಾಡುವ ಅಂಗಡಿಗಳ ಕೆಲ ಪ್ರದೇಶಗಳನ್ನು ತೆರವು ಗೊಳಿಸಲಾಯಿತು. ಬಸವೇಶ್ವರ ವೃತ್ತದಲ್ಲಿ ಸುಮಾರು ವರ್ಷಗಳಿಂದ ತರಕಾರಿ ಮಾರುಕಟ್ಟೆಯ ವ್ಯಾಪಾರಸ್ಥರು ಅಂಗಡಿಗಳನ್ನು ಅತಿಕ್ರಮವಾಗಿ ಆಕ್ರಮಿಸಿಕೊಂದ್ದರು. ಇದನ್ನು ಪರಿಗಣಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಜೊತೆಗೂಡಿಕೊಂಡು ಜೆ.ಸಿ.ಬಿಯ ಮೂಲಕ ತೆರವುಗೊಳಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಲಾಯಿತು.

ಕೊರೊನಾವನ್ನು ತಡೆಯುವ ಉದ್ದೇಶದಿಂದಾಗಿ ಮಾನ್ಯ ತಹಶೀಲ್ದಾರರ ಆದೇಶದ ಮೇರೆಗೆ ಎಪಿಎಂಸಿ ಆವರಣಕ್ಕೆ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿತ್ತು. ಆದರೆ ಕೆಲವು ವ್ಯಾಪಾರಸ್ಥರು ತಮ್ಮ ಮೂಲ ಸ್ಥಾನದಲ್ಲಿಯೇ ವ್ಯಾಪಾರವನ್ನು ಮಾಡುತ್ತ, ಅಧಿಕಾರಿಗಳ ಆದೇಶ ಮತ್ತು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದರು. ಅಲ್ಲದೇ ಗ್ರಾಮ ಪಂಚಾಯಿತಿ ವತಿಯಿಂದ ನಾಲ್ಕು ವರ್ಷಗಳಿಂದ ವ್ಯಾಪಾರಸ್ಥರಿಗೆ ಒತ್ತುವರಿ ಜಾಗವನ್ನು ಬಿಟ್ಟುಕೊಟ್ಟು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನೂಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದರೂ ಕೂಡ ಇದ್ಯಾವುದಕ್ಕೂ ವ್ಯಾಪಾರಸ್ಥರು ಸ್ಪಂದಿಸಿರಲಿಲ್ಲ.


ಸಾರ್ವಜನಿಕರ ಅನೂಕೂಲದ ದೃಷ್ಠಿಯಿಂದ ಹಾಗೂ ಕೋವಿಡ್‍ನಿಂದ ಪಾರಾಗಲು ಸಾರ್ವಜನಿಕರು ಗುಂಪು ಸೇರುವುದನ್ನು ತಡೆಯಲು ಗ್ರಾಮ ಪಂಚಾಯಿತಿ ವತಿಯಿಂದ ತೆರವುಗೊಳಿಸುವಂತಹ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕಾಯಿತು.

                ಮೌಲಾಲಿ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೈದಾಪುರ

ಅಕ್ರಮ ಒತ್ತುವರಿಯಿಂದ ಕಿರಿದಾದ ರಸ್ತೆಯಲ್ಲಿ ಜನರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿತ್ತು. ಆದ್ದರಿಂದ ಸಾರ್ವಜನಿಕರು ಹಿತ ದೃಷ್ಠಿಯಿಂದ ಒತ್ತುವರಿ ಜಾಗವನ್ನು ತೆರವುಗೊಳಿಸಲಾಯಿತು.

           ಮಾಳಪ್ಪ ಅರಿಕೇರಿ ಅಧ್ಯಕ್ಷರು ಗ್ರಾಮ ಪಂಚಾಯತ ಸೈದಾಪುರ