ದೇವನಹಳ್ಳಿಸೆ೨೮,ಪ್ರವಾಸಿ ತಾಣಗಳು ದೇಶದ ಅತ್ಯಮೂಲ್ಯ ಸಂಪತ್ತು ಜಗತ್ತನ್ನು ಪರಿಚಯಿಸುವ ಧ್ಯಾನ ಕೇಂದ್ರಗಳಾಗಿವೆ,
ದೇಶ_ದೇಶಗಳ ಸಂಬಂಧವನ್ನು ಬೆಸೆಯುವ ಕೊಂಡಿಯಾಗಿದೆ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಾದ ತಾಜ್ ಮಹಲ್, ಕಾಶಿ, ಸೋಮನಾಥ ದೇವಸ್ಥಾನ, ಕರ್ನಾಟಕದ ಬೇಲೂರು, ಹಳೇಬೀಡು, ಬಾದಾಮಿ, ಶ್ರವಣಬೆಳಗೊಳ ದೇವನಹಳ್ಳಿಯ ಟಿಪ್ಪು ಕೋಟೆ, ವೇಣುಗೋಪಾಲಸ್ವಾಮಿ ದೇವಸ್ಥಾನ, ಚಿಕ್ಕಬಳ್ಳಾಪುರದ ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟ ಹೀಗೆ ಹಲವಾರು ಸ್ಥಳಗಳು ದೇಶದ ಸಂಪತ್ತು ಗಳಾಗಿವೆ. ಎಂದು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ತಿಳಿಸಿದ್ರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು ಎಂಬ ಸಂದೇಶದೊಂದಿಗೆ ಸೆಪ್ಟೆಂಬರ್ ೨೭ ರ “ವಿಶ್ವ ಪ್ರವಾಸೋದ್ಯಮ ದಿನಾಚರಣೆ” ಅಂಗವಾಗಿ ತಾಲ್ಲೂಕು ಕಛೇರಿಯಿಂದ ದೇವನಹಳ್ಳಿ ಕೋಟೆಯವರೆಗೆ ಏರ್ಪಡಿಸಿದ್ದ ಸೈಕ್ಲಿಂಗ್ ಜಾಥಾ ಮತ್ತು ಸ್ವಚ್ಛತಾ ಕಾರ್ಯಕ್ರಮಕ್ಕೆ ಅವರು ಚಾಲನೆ ಮಾತನಾಡಿದರು.
ಪ್ರವಾಸಿ ತಾಣಗಳು ದೇಶದ ಅತ್ಯಮೂಲ್ಯ ಸಂಪತ್ತು ಎಂದು ಹೇಳಿದ ಸಚಿವರು ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಾದ ತಾಜ್ ಮಹಲ್, ಕಾಶಿ, ಸೋಮನಾಥ ದೇವಸ್ಥಾನ, ಕರ್ನಾಟಕದ ಬೇಲೂರು, ಹಳೇಬೀಡು, ಬಾದಾಮಿ, ಶ್ರವಣಬೆಳಗೊಳ ದೇವನಹಳ್ಳಿಯ ಟಿಪ್ಪು ಕೋಟೆ, ವೇಣುಗೋಪಾಲಸ್ವಾಮಿ ದೇವಸ್ಥಾನ, ಚಿಕ್ಕಬಳ್ಳಾಪುರದ ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಚೆಲುವಾಂಬ.ಪಿ, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಪುರಸಭೆ ಸದಸ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಚುನಾಯಿತ ಪ್ರತಿನಿಧಿಗಳು, ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.