ಸೈಕ್ಲಿಂಗ್ ಮೂಲಕ ಮಧುಗಿರಿಗೆ ಬಂದ ಎಸ್ಪಿ

ಮಧುಗಿರಿ, ಏ. ೨೦- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ತಿಪಟೂರು ಡಿವೈಎಸ್‌ಪಿ ಚಂದನ್ ರವರ ತಂಡ ತುಮಕೂರಿನಿಂದ ಮಧುಗಿರಿಗೆ ಬೈಸಿಕಲ್‌ನಲ್ಲಿ ಆಗಮಿಸಿ ವಿಶ್ವವಿಖ್ಯಾತ ಏಕಶಿಲಾ ಬೆಟ್ಟದ ತಪ್ಪಲಿನಲ್ಲಿ ವಿಶ್ರಾಂತಿ ಪಡೆದರು. ತುಮಕೂರಿನಿಂದ ಹೊರಟ ತಂಡ ೪೨ ಕಿ.ಮೀ. ದೂರವನ್ನು ಸೈಕ್ಲಿಂಗ್ ಮೂಲಕ ಕ್ರಮಿಸಿ ಮಧುಗಿರಿಗೆ ತಲುಪಿದೆ. ನಂತರ ಬೆಟ್ಟದ ತಪ್ಪಲಿನಲ್ಲಿ ವಿಶ್ರಾಂತಿ ಪಡೆದು ನಿರ್ಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಸಿ.ಪಿ.ಐ. ಎಂ.ಎಸ್.ಸರ್ದಾರ್ ಸೇರಿದಂತೆ ಮಧುಗಿರಿಯ ಎಲ್ಲಾ ಪೊಲೀಸ್ ಅಧಿಕಾರಿಗಳು ಸ್ವಾಗತ ಕೋರಿದರು. ಮಧುಗಿರಿ ಡಿವೈಎಸ್ಪಿ ಕೆ.ಜಿ. ರಾಮಕೃಷ್ಣ ಉಪಸ್ಥಿತರಿದ್ದರು.