ಸೈಕ್ಲಿಂಗ್ ಅಂಕಿತಾ, ಪಾಯಲ್ ಸಾಧನೆ

ವಿಜಯಪುರ, ಡಿ.1-ದಿ. 25ರಿಂದ 28 ನವೆಂಬರ್ ನಲ್ಲಿ ಹರಿಯಾಣ ರಾಜ್ಯದ ಕುರುಕ್ಷೇತ್ರದಲ್ಲಿ ನಡೆದ 26 ನೇ ರಾಷೀಯ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್‍ನಲ್ಲಿ ವಿಜಯಪುರ ಜಿಲ್ಲೆಯ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿ ಪಿಯು ಕಾಲೇಜ ತಿಡಗುಂದಿಯ ವಿದ್ಯಾರ್ಥಿನಿಯರಾದ ಕುಮಾರಿ ಅಂಕಿತಾ ರಾಠೋಡ ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ, ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ಅದೇ ರೀತಿ ಕುಮಾರಿ ಪಾಯಲ್ ಚವಾಣ್ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಈ ಇಬ್ಬರು ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಬಸನಗೌಡ ಹರನಾಳ ಹಾಗೂ ಸಿಬ್ಬಂದಿ ವರ್ಗ ತುಂಬು ಹೃದಯದ ಅಭಿನಂದನೆಗಳು ತಿಳಿಸಿದ್ದಾರೆ.