ಸೈಕೋ ಥ್ರಿಲ್ಲರ್ `ಉಸಿರು’

ಸೈಕೋ ಥ್ರಿಲ್ಲರ್ ಕಥೆ ಹೊಂದಿರುವ ” ಉಸಿರು” ಚಿತ್ರದ ಪೋಸ್ಟರ್ ಅನಾವರಣವಾಗಿದೆ.ನಟ ತಿಲಕ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಪ್ರಭಾಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಲಕ್ಷ್ಮಿಹರೀಶ್  ಬಂಡವಾಳ ಹೂಡುತ್ತಿದ್ದಾರೆ.

ಬೇಜವಾಬ್ದಾರಿ ಪೊಲೀಸ್ ಅಧಿಕಾರಿಯ ಹೆಂಡತಿಗೆ ಅನಾಮಿಕನಿಂದ ಪ್ರಾಣಕ್ಕೆ ಆಪತ್ತು ಬಂದಾಗ ಆತ ಹೆಂಡತಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ,ತಾಯಿಯನ್ನು ಕೊಂದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದನ್ನು ಉಸಿರು ಚಿತ್ರದ ಮೂಲಕ ನಿರ್ದೇಶಕ ಪ್ರಭಾಕರ್ ಹೇಳಹೊರಟಿದ್ದಾರೆ. ನಿರ್ಮಾಪಕಿ ಲಕ್ಷ್ಮಿ ಹರೀಶ್ ಮಾತನಾಡಿ  ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ತಿಲಕ್  ಚಿತ್ರೀಕರಣದಲ್ಲಿ ಇದ್ದುದರಿಂದ ಬರಲು ಆಗಿಲ್ಲ ಎಂದರು.

ನಿರ್ದೇಶಕ ಪ್ರಭಾಕರ್ ಮಾತನಾಡಿ ಇದೊಂದು ಸೈಕೋ ಥ್ರಿಲ್ಲರ್ ಚಿತ್ರ.ಉಸಿರು ಶೀರ್ಷಿಕೆ ಕಥೆಗೆ ಸೂಕ್ತವಾಗುತ್ತೆ ಅಂತ ಇಟ್ಟಿದ್ದೇವೆ. ಒಂದೊಳ್ಳೇ ಟೀಮ್ ಕಟ್ಟಿಕೊಂಡು ಈ ಸಿನಿಮಾ ಮಾಡುತ್ತಿದ್ದು  ತಿಲಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ, ರಂಗಾಯಣ ರಘು  ಸೇರಿದಂತೆ ಪಾತ್ರಗಳ ಮೇಲೆ ಚಿತ್ರದ ಕಥೆ ಸಾಗುತ್ತದೆ ಮೊದಲ ಹಂತದ ಚಿತ್ರೀಕರಣವನ್ನು ಮಡಿಕೇರಿಯಲ್ಲಿ  15 ದಿನಗಳ ಕಾಲ ನಡೆಸಿ ನಡೆಸಿ ನಂತರ ಬೆಂಗಳೂರಲ್ಲಿ ಮುಂದುವೆಸುತ್ತೇವೆ ಎಂದರು.

 ನಾಯಕಿ ಪ್ರಿಯಾ ಹೆಗ್ಡೆ ಮಾತನಾಡಿ ಚಿತ್ರದ  ಕಾನ್ಸೆಪ್ಟ್, ಟೈಟಲ್  ಎರಡೂ ಚೆನ್ನಾಗಿದೆ,   ಪಾತ್ರಕ್ಕೆ ಎರಡು ಶೇಡ್ ಇದೆ ಎಂದು ಹೇಳಿದರೆ ಮತ್ತೊಬ್ಬ ನಟ ಸಂತೋಷ್, ಸಂಗೀತ ನಿರ್ದೇಶಕ ಆರ್‍ಎಸ್‍ಜಿ ನಾರಾಯಣ ನಟಿ ಅಪೂರ್ವ  ಮತ್ತಿತರರು ಮಾಹಿತಿ ನೀಡಿದರು.