ಸೈಕೋ ಕಿಲ್ಲರ್ “ರಿಚ್ಚಿ”

ಸೈಕೋ ಕಿಲ್ಲರ್ ಸುತ್ತ ನಡೆಯುವ ಕಥೆ ಹೊಂದಿರುವ “ರಿಚ್ಚಿ’ ಚಿತ್ರದ ಬಹುಪಾಲು ಚಿತ್ರೀಕರಣ ಬೆಂಗಳೂರು ಹಾಗೂ ಮಡಿಕೇರಿಯ ಸುತ್ತಮುತ್ತ ನಡೆಸಲಾಗಿದೆ.
ಸೈಕಿಕ್ ವ್ಯಕ್ತಿಯ ಸುತ್ತ ನಡೆಯುವ ಸುತ್ತ ಸಸ್ಪೆನ್ಸ್, ಥ್ರಿಲ್ಲರ್ ಜೊತೆಗರ ಸುಂದರ ಲವ್ ಸ್ಟೋರಿಯೂ ಚಿತ್ರದಲ್ಲಿದೆ. ಸೈಕೋ ಕಿಲ್ಲರ್‌ ಮಾಡುವ ಕೆಲಸಗಳು ಯಾರಿಗೂ ಗೊತ್ತಾಗುವುದಿಲ್ಲ, ಒಮ್ಮೆ ನಡೆದ ಘಟನೆಯಲ್ಲಿ ಚಿಕ್ಕ ಕ್ಲೂ ಸಿಗುತ್ತದೆ, ಆನಂತರ ಏನಾಗುತ್ತದೆ ಎನ್ನುವುದೇ ಚಿತ್ರದ ಕುತುಹಲ ಎನ್ನುವುದು ಚಿತ್ರತಂಡದ ಮಾಹಿತಿ
ನಾಯಕ ರಿಚ್ಚಿ, ನಿರ್ದೇಶಕ,ನಿರ್ಮಾಪಕರೂ ಆಗಿದ್ದಾರೆ. ಯಶ್ವಿಕಾ ನಿಶ್ಕಳಾ‌ ನಾಯಕಿ.
ಸೋನುನಿಗಂ ಹಾಡಿರುವ ಚಿತ್ರದ ರೊಮ್ಯಾಂಟಿಕ್ ವೀಡಿಯೋ ಹಾಡನ್ನು ಬಿಡುಗಡೆ ಮಾಡಲಾಯಿತು
ಈ ಹಾಡಿಗೆ ಚಿನ್ನಿಪ್ರಕಾಶ್ ಇದಕ್ಕೆ ಕೊರಿಯಾಗ್ರಾಫಿ ಮಾಡಿದ್ದಾರೆ. ಮಡಿಕೇರಿಯ ಕೋಡಿ ಬೆಟ್ಟದಲ್ಲಿ ಮೂರು ದಿನಗಳ ಕಾಲ ಈ ಹಾಡಿನ ಶೂಟಿಂಗ್ ನಡೆಸಲಾಗಿದೆ.
ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಾಯಕ ಕಂ ನಿರ್ದೆಶಕ ರಿಚ್ಚಿ ಇದೇ ಮೊದಲಬಾರಿಗೆ ನಿರ್ದೇಶನ ಹಾಗೂ ನಿರ್ಮಾ ಮಾಡಿದ್ದೇನೆ. ಚಿತ್ರದಲ್ಲಿ ಒಬ್ಬ ಪ್ರೆಸ್ ರಿಪೋರ್ಟರ್ ಪಾತ್ರ.ಈಗಾಗಲೇ ಚಿತ್ರಕ್ಕೆ ಶೇ70ರಷ್ಟು ಚಿತ್ರೀಕರಣವನ್ನು ಮುಗಿಸಿದ್ದು, ಉಳಿದ ಭಾಗವನ್ನು ಮೈಸೂರು ಹಾಗೂ ಗೋವಾದಲ್ಲಿ ಶೂಟ್ ಮಾಡುವ ಪ್ಲಾನ್ ಇದೆ ಎಂದು ಹೇಳಿದರು.
ನಾಯಕಿ ಯಶ್ವಿಕಾ ನಿಶ್ಕಳಾ ಮೊದಲದಲ್ಲಿಯೇ ಹೋಮ್ಲಿ ಗರ್ಲ್ ಪಾತ್ರ. ನನಗೆ ನಾಯಕನ ಪರಿಚಯ ಹೇಗಾಗುತ್ತದೆ, ಆತನ ಲವ್‍ನಲ್ಲಿ ಬಿದ್ದಾಗ ಏನೆಲ್ಲ ಎದುರಿಸಬೇಕಾಗುತ್ತದೆ ಎಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ.
ಚಿತ್ರದ ಛಾಯಾಗ್ರಾಹಕ ವೀರೇಶ್ ,ನಿರ್ದೇಶಕರ ಪರಿಕಲ್ಪನೆಯಂತೆ ಚಿತ್ರವನ್ನು ತೆರೆಮೇಲೆ ತರಲು ಪ್ರಯತ್ನಿಸಲಾಗಿದೆ ಎಂದರು.
ಬಾಂಬೆ ಮೂಲದ ನಟ ಮನೋಜ್ ಮಿಶ್ರ ವಿಲನ್ ಪಾತ್ರ ಮಾಡಿದ್ದಾರೆ. ರಾಕೇಶ್ ಸಹ ನಿರ್ಮಾಣ ರಿಚ್ಚಿ ಚಿತ್ರಕ್ಕಿದೆ. ಅಗಸ್ತ್ಯ ಸಂತೋಷ್ ಸಂಗೀತವಿದೆ
ಚಿತ್ರದ ತಾರಾಗಣದಲ್ಲಿ ರಮೇಶ್ ಪಂಡಿತ್ ಹಾಗೂ ಮಿಮಿಕ್ರಿ ಗೋಪಿ ಮುಂತಾದವರು ನಟಿಸಿದ್ದಾರೆ. ಕೊರೋನಾ ಮುಗಿದ ಬಳಿಕ ಚಿತ್ರ ಬಿಡುಗಡೆಯಾಗುವ ಸಾದ್ಯತೆಗಳಿವೆ.