ಸೈಕಲ್ ಸವಾರ ನಾಗೇಗೌಡಗೆ ಸನ್ಮಾನ

ಹುಬ್ಬಳ್ಳಿ,ನ18-ರಾಷ್ಟ್ರೀಯ ಏಕತೆ . ದೇಶಭಕ್ತಿ, ನೀರು ಉಳಿಸಿ ಹಸಿರು ಬೆಳೆಸಿ ,ಗೋರಕ್ಷಣೆ ಪ್ರಾಣಿ ಸಂಪತ್ತು ಸಂರಕ್ಷಣೆ ಹಾಗೂ ಭಾರತ ದೇಶ ಮಹಾಮಾರಿ ಕೊರೊನಾ ಮುಕ್ತವಾಗಿ, ದೇಶದಲ್ಲಿ ಸುಖ ಶಾಂತಿ ಸಮೃದ್ಧಿಯಾಗಲಿ. ದೇಶದ ಜನತೆ ಸಹಬಾಳ್ವೆಯಿಂದ ಕೋಮುಸೌಹಾರ್ದತೆ ಯಿಂದ ಬದುಕಲಿ.
ಸೈಕಲ್ ಮುಖಾಂತರ ಜಗತ್ತಿನ ಇತಿಹಾಸದಲ್ಲಿ ಭಾರತ ದೇಶ ವಿಜೃಂಭಿಸಲಿ ಎಂಬ ಮಹದಾಸೆಯೊಂದಿಗೆ ಸೈಕಲ್ ಮುಖಾಂತರ ತಮ್ಮ ಇಳಿವಯಸ್ಸಿನಲ್ಲಿ ದೇಶ ಪರ್ಯಟನೆ ಮಾಡುತ್ತಿರುವ ಮಂಡ್ಯದ ನಾಗೇಗೌಡರು ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಆಗಮಿಸಿದಾಗ ಶ್ರೀಮಠದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಸದಾನಂದ. ವಿ.ಡಂಗನವರ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ನಾಗರಾಜ್ ಗೌಡ್ರು ತಮ್ಮ ಇಳಿವಯಸ್ಸಿನಲ್ಲಿ ದೇಶಾದ್ಯಂತ ಒಳ್ಳೆಯ ಸಂದೇಶವನ್ನು ಸೈಕಲ್ ಮುಖಾಂತರ ದೇಶ ಪರ್ಯಟನೆ ಮಾಡಿ ಸಾರುತ್ತಿದ್ದ ಅವರು ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಅಧ್ಯಕ್ಷರಾದ ಗುರುರಾಜ್ ಹುಣಸಿಮರದ, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಮೈಲಾರ ಉಪ್ಪಿನ, ಉಪಾಧ್ಯಕ್ಷರಾದ ರವಿರಾಜ್ ದಾಸನೂರು, ಜಯದೇವ್ ಹಿರೇಮಠ್, ಮಂಜುನಾಥ್ ಹೆಬಸೂರು, ಹರೀಶ್ ಹಳ್ಳಿಕೇರಿ ,ಪುನೀತ್ ಅಡಿಗಲ್, ರಫೀಕ ದರಗಾದ, ಅನಿಲ್ ಬನಿಯನ್, ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು*