
ದಾವಣಗೆರೆ. ಮಾ.೧೦: ವಾಹನಗಳ ಸಂಖ್ಯೆ ಹೆಚ್ಚಾಗಿ, ಅನಾರೋಗ್ಯಗಳು ಹಾಗೂ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪೆಟ್ರೋಲ್ ದರ ಅತೀ ದುಬಾರಿಯಾಗಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಆದ್ದರಿಂದ ಕೂಲಿಕಾರ್ಮಿಕರಿಗೆ ಸಹಾಯವಾಗಲಿ ಮತ್ತು ಪೇಪರ್ ಹಾಕಿ ತಮ್ಮ ವ್ಯಾಸಂಗವನ್ನು ಮುಂದುವರೆಸುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿ ಎನ್ನುವ ಉದ್ದೇಶದಿಂದ 10 ಸೈಕಲ್‌ಗಳನ್ನು ವಿತರಿಸಿದ್ದೇವೆ. ದಯವಿಟ್ಟು ಸೈಕಲ್‌ಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರುಣಾ ಟ್ರಸ್ಟಿನ ಕಾರ್ಯದರ್ಶಿಗಳಾದ ಶಿವನಕೆರೆ ಬಸವಲಿಂಗಪ್ಪ ತಿಳಿಸಿದರು. ಜೊತೆಗೆ ಇಂತಹ ಸತ್ಕಾರ್ಯ ಎಲ್ಲಾ ಸಹೃದಯ ದಾನಿಗಳಿಂದಾಗಿದೆ ಎಂದು ಹೇಳುತ್ತಾ ಟ್ರಸ್ಟಿನ ಎಲ್ಲಾ ದಾನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಜೊತೆಗೆ ದಯವಿಟ್ಟು ಇನ್ನೂ ಹೆಚ್ಚಿನ ಮಟ್ಟದಲ್ಲಿ ಧನಸಹಾಯ ಮಾಡಿ, ಟ್ರಸ್ಟಿನ ಸತ್ಕಾರ್ಯಗಳಿಗೆ ಕೈಜೋಡಿಸಬೇಕಾಗಿ ವಿನಂತಿಸಿದರು.ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ 10 ಬಡ ಕೂಲಿ ಕಾರ್ಮಿಕರಿಗೆ ಸೈಕಲ್‌ಗಳನ್ನು ವಿತರಿಸುವ ಸಂದರ್ಭದಲ್ಲಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಂ.ಜಿ. ಈಶ್ವರಪ್ಪನವರು ಕೂಲಿಕಾರ್ಮಿಕರನ್ನು ಕುರಿತು ಕುಡಿತ, ತಂಬಾಕು ಇತ್ಯಾದಿ ದುಶ್ಚಟ ಬಿಟ್ಟು, ದೈಹಿಕ, ಮಾನಸಿಕ ಆರೋಗ್ಯ ಕಾಲಪಾಡಿಕೊಂಡು ಸೈಕಲ್ ಸವಾರಿಯಿಂದ ಉಳಿತಾಯ ಮಾಡಿದ ಹಣವನ್ನು ನಿಮ್ಮ ಶ್ರೀಮತಿಯವರಿಗೆ ನೀಡಿ, ಎಫ್.ಡಿ. ಮಾಡಿ ಎಂದು ಸೂಚಿಸಿದರು.