ಸೈಕಲ್ ಮೇಲೆ ಅಪ್ಪು ಅಭಿಮಾನಿ ವಿಶ್ವ ಪರ್ಯಟನೆ

ಬೀದರ್: ಏ.12:ಸೈಕಲ್ ಮೇಲೆ ವಿಶ್ವ ಪರ್ಯಟನೆ ನಡೆಸುತ್ತಿರುವ ನಟ ಪುನೀತ್ ರಾಜಕುಮಾರ ಅಭಿಮಾನಿ, ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆÇೀಲ್ಲಾಚಿ ಗ್ರಾಮದ ಮುತ್ತುಸೆಲ್ವಂ ಪರಂಪರೆ ನಗರ ಬೀದರಗೆ ಈಚೆಗೆ ಭೇಟಿ ನೀಡಿದರು.
ಕಲಬುರಗಿಯಿಂದ ನಗರಕ್ಕೆ ಆಗಮಿಸಿದ ಅವರನ್ನು ಹಣ್ಮುಪಾಜಿ ಗೆಳೆಯರ ಬಳಗದ ಪ್ರಮುಖರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.
ನಟ ಪುನೀತ್ ರಾಜಕುಮಾರ ಅವರು ನನ್ನ ಪತ್ನಿ ಅನಾರೋಗ್ಯಕ್ಕೆ ಈಡಾದಾಗ ನೆರವಾಗಿದ್ದರು. ನಂತರ ಅವರಿಗೆ ಕೃತಜ್ಞತೆ ಸಲ್ಲಿಸಲು ಆಗಿರಲಿಲ್ಲ. ಹೀಗಾಗಿ ಅಪ್ಪು ಅವರ ಮಾನವೀಯ ಗುಣಗಳನ್ನು ಭಾರತ ಹಾಗೂ ಅಕ್ಕ ಪಕ್ಕದೇಶಗಳಿಗೆ ತಲುಪಿಸಲು ಹಾಗೂ ಅವರ ಹೆಸರಲ್ಲಿ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಲು ಸೈಕಲ್ ಮೇಲೆ ವಿಶ್ವ ಯಾತ್ರೆ ನಡೆಸುತ್ತಿದ್ದೇನೆ ಎಂದು ಮುತ್ತುಸೆಲ್ವಂ ತಿಳಿಸಿದರು.
ಸೈಕಲ್ ಮೇಲೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ ಭಾವಚಿತ್ರ, ತ್ರಿವರ್ಣ ಧ್ವಜ, ನಾಡ ಧ್ವಜ ಇದೆ. ಸೈಕಲ್ ಸೇರಿ ಒಟ್ಟು 192 ಕೆ.ಜಿ. ಯ ಸವಾರಿ ಮಾಡುತ್ತಿದ್ದೇನೆ ಎಂದು ಹೇಳಿದರು.
2021ರ ಡಿ. 21ಕ್ಕೆ ಯಾತ್ರೆ ಆರಂಭಿಸಿ, 841 ದಿನಗಳಲ್ಲಿ ನೇಪಾಳ್, ಬಾಂಗ್ಲಾದೇಶ, ವಿಯೆಟ್ನಾಂ ದೇಶಗಳು, ಭಾರತದ ವಿವಿಧ ರಾಜ್ಯಗಳನ್ನು ಸುತ್ತಿದ್ದೇನೆ. 2025 ರ ಜನವರಿ 5ಕ್ಕೆ ಇಂಡಿಯಾ ಗೇಟ್ ಬಳಿ ಯಾತ್ರೆ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.
ಸೈಕಲಗೆ ಜಿಪಿಎಸ್ ಅಳವಡಿಸಲಾಗಿದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೆÇಲಿಸ್ ವರಿಷ್ಠಾಧಿಕಾರಿ ಹಸ್ತಾಕ್ಷರ, ಫೆÇೀಟೋ ತೆಗೆದುಕೊಳ್ಳುತ್ತಿದ್ದೇನೆ. ಸೈಕಲ್ ಮೇಲೆ 22,800 ಕಿ.ಮೀ. ಕ್ರಮಿಸಿರುವುದು ಹಾಗೂ 3,12,600 ಸಸಿಗಳನ್ನು ನೆಟ್ಟಿರುವುದು ಗಿನ್ನಿಸ್ ದಾಖಲೆಯಾಗಿದೆ ಎಂದು ತಿಳಿಸಿದರು.
ಪವರ್ ಸ್ಟಾರ್ ಅಭಿಮಾನಿ ಸೈಕಲ್ ಮೇಲೆ ವಿಶ್ವ ಪರ್ಯಟನೆ ಮಾಡುತ್ತಿರುವುದು ಸಂತಸದ ಸಂಗತಿ. ಅಪ್ಪು ಮಾನವೀಯ ಗುಣಗಳನ್ನು ಜಗತ್ತಿಗೆ ಪರಿಚಯಿಸುತ್ತಿರುವ ಮುತ್ತುಸೆಲ್ವಂ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಜಿಲ್ಲೆಯವರೇ ಆದ ಚಿತ್ರನಟ ಹಣ್ಮುಪಾಜಿ ಹೇಳಿದರು.
ಡಾ. ಸಂಗಮೇಶ ವಡಗಾವೆ, ಗುರು ಸಿಂದೋಲ್, ಮಂಜುನಾಥ ಎಚ್. ಖೂಬಾ, ಸಾಗರ್ ಬುಟ್ಟೆ, ಮಂಜುನಾಥ ಹೂಗಾರ, ಅಶ್ವನಿ ಶರ್ಮಾ, ಸಂದೀಪ್ ಚಿದ್ರೆ, ರಾಕೇಶ, ನಿತಿನ್ ಕರ್ಪೂರ ಇದ್ದರು.
ವಿವಿಧೆಡೆ ಭೇಟಿ: ಮುತ್ತುಸೆಲ್ವಂ ಅವರು ಬೀದರ್ ಕೋಟೆ, ಗುರುದ್ವಾರಕ್ಕೆ ಭೇಟಿ ನೀಡಿದರು. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿ ಹಸ್ತಾಕ್ಷರ ಪಡೆದರು. ಬಳಿಕ ಔರಾದಗೆ ತೆರಳಿದರು.