ಸೈಕಲ್ ಬಳಸಿ;ಪರಿಸರ ಆರೋಗ್ಯ ಉಳಿಸಿ

ಕಲಬುರಗಿ,ಜೂ 3:ದೇಹದ ಆರೋಗ್ಯ, ಪರಿಸರ ಸಮತೋಲನಕ್ಕೆ ಸೈಕಲ್ ಸವಾರಿ ಅತ್ಯಂತ ಹೆಚ್ಚು ಸಹಕಾರಿಯಾಗಿದೆ ಎಂದು ಸಮಾಜ ಚಿಂತಕ ರವಿ ಲಾತೂರಕರ ಅವರು ಹೇಳಿದ್ದಾರೆ.
ಇಂದಿನ ವಿಶ್ವ ಸೈಕಲ್ ದಿನಾಚರಣೆಯ ಸಂದರ್ಭದಲ್ಲಿ ಹೇಳಿಕೆ ನೀಡಿದ ಅವರು ಸೈಕಲ್ ಬಳಸಿ ಪರಿಸರ ಸಂರಕ್ಷಣೆಗೆ ಸಹಕರಿಸಿ. ಸೈಕಲ್ ಬಳಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು.ಇಂದಿನ ಒತ್ತಡದ ಜಗತ್ತಿನಲ್ಲಿ ದೈಹಿಕ ಶ್ರಮ ಕಡಿಮೆಯಾಗಿದೆ. ಮತ್ತೆ ಸೈಕಲ್ ತುಳಿಯಲು ಪ್ರಾರಂಭಿಸಬೇಕು. ಎಷ್ಟೋ ಜನರಿಗೆ ಮರ್ಯಾದೆ ಕಡಿಮೆ ಆಗುತ್ತೆ ಅನ್ನುವ ಕಾರಣಕ್ಕೆ ಇದರಿಂದ ದೂರ ಉಳಿದಿದ್ದಾರೆ. ಸರ್ಕಾರಿ ಅಧಿಕಾರಿಗಳು,ರಾಜಕೀಯ ವ್ಯಕ್ತಿಗಳು,ಧರ್ಮ ಗುರುಗಳು,ಪತ್ರಕರ್ತರು,ಬುದ್ಧಿ ಜೀವಿಗಳು,ಸಮಾಜ ಸೇವಕರು,ಯುವಕರು ಕೂಡ ವಾರಕ್ಕೆ ಒಂದು ದಿನ ಸೈಕಲ್ ಬಳಸಿ ಜನರಿಗೆ ಪ್ರೇರಣೆ ನೀಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.