ಸೈಕಲ್ ಜಾಥಾ

ನವಲಗುಂದ,ಜೂ.4: ಸೈಕಲ್ ಸವಾರಿ ಇಂದಿನ ದಿನಮಾನಕ್ಕೆ ಪ್ರತಿಯೊಬ್ಬರಿಗೂ ಅತ್ಯಾವಶ್ಯಕವಾಗಿದೆ. ಇಂದು ನಾವೆಲ್ಲರೂ ಸೇವಿಸುತ್ತಿರುವ ವಿಷಕಾರಿ ಆಹಾರ, ಗಾಳಿ, ಸೇವನೆ ಸರ್ವೇಸಾಮಾನ್ಯವಾಗಿದೆ. ಇದೆಲ್ಲಕ್ಕೆ ಮುಕ್ತಿ ಕಾಣಿಸಲು ನಾವೆಲ್ಲರೂ ಮರಳಿ ಸೈಕಲ್ ಗೆ ತೇರಳಬೇಕಾಗಿದೆ ಎಂದು ಧಾರವಾಡದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಪ್ರಕಾಶ್ ಹೊಸಮನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸ್ಥಳೀಯ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದಡಿಯಲ್ಲಿ ಜೂನ್ 3 “ವಿಶ್ವ ಸೈಕಲ್ ದಿನದ ” ಅಂಗವಾಗಿ ಹಮ್ಮಿಕೊಂಡ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಉತ್ತಮ ಆರೋಗ್ಯ, ಇಂಧನ ಉಳಿತಾಯ, ಸ್ವಚ್ಛವಾದ ಗಾಳಿ ಸೇವಿಸಲು ಎಲ್ಲರಿಗೂ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರ ದೇಹದಂಡನೆಗೆ “ಪಿಟ್ ಇನ್ ಇಂಡಿಯಾ”ಎಂಬ ಯುವಕರಿಗೆ ನೂತನ ಕಾರ್ಯಕ್ರಮ ಜಾರಿಗೆ ತಂದಿದೆ. ಅದ್ದರಿಂದ ಯುವಕರು ಇನ್ನುಮುಂದೆ ಕಡ್ಡಾಯವಾಗಿ ಸಮೀಪವಾದ ಸ್ಥಳಕ್ಕೆ ಹೋಗಲು ಸೈಕಲ್ ಅನ್ನೆ ಬಳಸಿ, ಮುಂದುವರಿದ ರಾಷ್ಟಗಳಲ್ಲಿ ಎಲ್ಲರೂ ಈಗ ಸೈಕಲ್ ಅನ್ನು ಹೆಚ್ಚು ಬಳಸಲು ಪ್ರಾರಂಬಿಸಿದ್ದಾರೆ ಎಂದರು.
ನಂತರ ಸ್ವಯಂ ಸೇವಕರು ಮಹಾವಿದ್ಯಾಲಯದಿಂದ ಪಟ್ಟಣದ ವಿವಿಧ ಬೀದಿ ಗಳಲ್ಲಿ ಜಾಥಾ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಜಂಟಿ ನಿರ್ದೇಶಕರ ಕಚೇರಿಯ ವಿಶೇಷಧಿಕಾರಿಗಳಾದ ಡಾ. ಎ ಎಂ ಶಿರಹಟ್ಟಿ, ಉಪನಿರ್ದೇಶಕರಾದ ಲಕ್ಷ್ಮಿಪತಿ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶ್ರೀನಿವಾಸ್ ಬಡಿಗೇರ ಹಾಗೂ ಪೆÇ್ರ ಜೆ ಪಿ ಲಮಾಣಿ, ಮಹಾವಿದ್ಯಾಲಯದ ಪ್ರಧ್ಯಾಪಕರಾದ ಡಾ. ಶೀಲಾ ತುಬುಚಿ, , ಡಾ. ಎಂ ಎನ್ ಹಾರೋಗೇರಿ ,ಡಾ ರಮೇಶ ಚವ್ವಾಣ, ಡಾ ಆರ್ ಎಂ ಸರ್ವದೆ, ಡಾ ರುದ್ರಮುನಿ, ವಿಜಯಲಷ್ಮಿ ಸಾವಂತ, ಹಾಗೂ ಕಛೇರಿ ಸಿಬ್ಬಂದಿಗಳಾದ ಎಂ ವಿ ಹೊಳೆಯನ್ನವರ, ಬಿ ಕೆ ಮಹೇಶ್, ಎನ್ ಎಸ್ ಎಸ್ ಸ್ವಯಂ ಸೇವಕರ ಪ್ರತಿನಿಧಿಯಾದ ಕುಮಾರ ರಾಜೇಶ್ ದೊಡ್ಡಮನಿ, ಎಲ್ಲ ಸ್ವಯಂ ಸೇವಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.