ಸೈಕಲ್ ಚಾಲನೆ ಆರೋಗ್ಯಕರ ಜೀವನಕ್ಕೆ ಸಹಕಾರಿ: ಆನಂದ್ ಸಿಂಗ್

ಹೊಸಪೇಟೆ,ಜ.10- ನವೋಲ್ಲಸದ ಜೀವನ ನಮ್ಮೆಲ್ಲರದ್ದಾಗಬೇಕು ಮತ್ತು ಹೊಸ ವರ್ಷ ಎಲ್ಲರಿಗೂ ಶುಭ ತರಬೇಕೆನ್ನುವ ಸಂಕಲ್ಪದೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಚಿವ ಆನಂದ ಸಿಂಗ್ ತಿಳಿಸಿದರು.
ಇಂದು ಬೆಳಿಗ್ಗೆ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ಜೈನ್ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಸೇಷನ್ ವತಿಯಿಂದ ನ್ಯೂ ಲೈಫ್ ನ್ಯೂ ಡಿಸ್ಟ್ರಿಕ್ ಸೆಲೆಬ್ರೆಷನ್ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಸೈಕ್ಲೋಥನ್-2021 ಕಾರ್ಯಕ್ರಮವನ್ನು ಸಚಿವರಾದ ಆನಂದ ಸಿಂಗ್ ರವರು ಸೈಕಲ್ ಚಾಲನೆ ಮಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಹೊಸಪೇಟೆ ನಗರವನ್ನು ಸೈಕಲ್ ಸಹಾಯದಿಂದ ಸಂಚರಿಸಿ ಉತ್ತಮ ವಾತಾವರಣವನ್ನು ಸವಿಯುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗ್ತದೆ ಎಂದರು. ಪ್ರತಿಯೊಬ್ಬರು ಯೋಗ ಮತ್ತು ವ್ಯಾಯಾಮವನ್ನು ದಿನನಿತ್ಯ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಜೊತೆ ದೇಹವನ್ನು ಸಧೃಡವಾಗಿಟ್ಟುಕೊಳ್ಳಬಹುದು ಎಂದರು. ಬೆಳ್ಳಂಬೆಳಿಗ್ಗೆ ಸೈಕಲ್ ತುಳಿದ ಅವರು ಸೈಕಲ್ ಹತ್ತಿ ಬರುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ವಾಯು ವಿಹಾರಿಸುತ್ತಿದ್ದ ಜನರೆಲ್ಲರೂ ಬೆಂಬಲಿಸಿದರು.
ಈ ವೇಳೆ ಇಂದರ್ ಕುಮಾರ ಜೈನ್, ಹಿತೈಷ್ ಬಾಗರೇಚ್, ಮಹೇಂದ್ರ ಜೈನ್, ಇತರರು ಇದ್ದರು.