ಸೇವ್

ಬೇಕಾಗುವ ಸಾಮಗ್ರಿಗಳು
*ಕಡಲೇಹಿಟ್ಟು – ೧/೨ ಕೆ.ಜಿ
*ಜೀರಿಗೆ – ೨ ಚಮಚ
*ಕಾಳು ಮೆಣಸಿನಪುಡಿ-
*ಬಿಳಿ ಎಳ್ಳು – ೨ ಚಮಚ
*ಬೆಣ್ಣೆ – ೫೦ ಗ್ರಾಂ
*ನೀರು –
*ತುಪ್ಪ – ೨ ಚಮಚ
*ಓಂ ಕಾಳು- ೧ ಚಮಚ
*ಎಣ್ಣೆ- ೧ ಲೀಟರ್
*ಅಡುಗೆ ಸೋಡ- ೧/೨ ಚಮಚ
*ಗ್ರೀನ್ ಚಿಲ್ಲಿ ಪೇಸ್ಟ್- ೨ ಚಮಚ

ಮಾಡುವ ವಿಧಾನ :

ಬಾಣಲಿಗೆ ಎಣ್ಣೆ ಹಾಕಿ ಕಾಯಿಸಿಕೊಳ್ಳಿ. ಬೌಲ್‌ನಲ್ಲಿ ಕಡಲೆಹಿಟ್ಟು, ಜೀರಿಗೆ, ಕಾಳು ಮೆಣಸಿನ ಪುಡಿ, ಓಂಕಾಳು, ಹಸಿರು ಮೆಣಸಿನಕಾಯಿ ಪೇಸ್ಟ್, ಉಪ್ಪು, ತುಪ್ಪ, ಬೆಣ್ಣೆ, ಅಡುಗೆ ಸೋಡ, ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಕಲಸಿದ ಹಿಟ್ಟನ್ನು ಚಕ್ಕುಲಿ ಒರಳಿಗೆ ಹಾಕಿ ಕಾದ ಎಣ್ಣೆಯಲ್ಲಿ ಒತ್ತಿ ಕರಿಯಿರಿ. ಈಗ ಗರಿಗರಿಯಾದ ಸೇವ್ ತಿನ್ನಲು ರೆಡಿ.