ಸೇವೆ ಸಲ್ಲಿಸಲು ಸಿದ್ದರಿರಬೇಕು:ಡಾ.ಕೆ.ಆರ್.ದುರುಗೇಶ್

ಸ್ವಯಂ ಸೇವಕರಿಗೆ ಮೂರನೇಯ ಹಂತದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ
ರಾಯಚೂರು,ಜು.೧೮- ಜಿಲ್ಲೆಯಲ್ಲಿ ಮೂರನೇ ಆಪತ್ತು ಮಿತ್ರ ಯೋಜನೆಯನ್ನು ಯಶಸ್ವಿಗೊಳಿಸಲು ಸ್ವಯಂ ಸೇವಕರಿಗೆ ತರಬೇತಿಯು ಅವಶ್ಯಕವಾಗಿದು, ತರಬೇತಿ ಪಡೆದ ನಂತರ ಸ್ವಯಂ ಸೇವಕರು ವಿಪತ್ತು ಸಂದರ್ಭದಲ್ಲಿ ಸೇವೆ ಸಲ್ಲಿಸಲು ಸಿದ್ದರಿಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಅವರು ಕರೆ ನೀಡಿದರು.
ಅವರು ಜು.೧೮ರ ಸೋಮವಾರ ದಂದು ನಗರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಸ್ವಯಂ ಸೇವಕರಿಗೆ ಮೂರನೇಯ ಹಂತದ ವಿಪತ್ತು ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಆಪದ ಮಿತ್ರ ಯೋಜನೆಯಡಿಯಲ್ಲಿ ಮೊದಲನೇಯ ಹಾಗೂ ಎರಡನೇ ಹಂತದಲ್ಲಿ ಸುಮಾರು ೨೦೦ ಜನ ಸ್ವಯಂ ಸೇವಕರಿಗೆ ತರಬೇತಿನೀಡಲಾಗಿದ್ದು, ಪ್ರಸ್ತುತ ಮೂರನೇ ಹಂತದ ಆಪದ ಮಿತ್ರ ಯೋಜನೆಯಡಿಯಲ್ಲಿ ೧೦೦ಜನ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುತ್ತಿದ್ದು, ಸೇವೆ ಮಾಡಲು ಸ್ವಯಂಕರು ಸದಾ ಸಿದ್ಧರಿರಬೇಕೆಂದು ಹೇಳಿದರು.
ಸ್ವಯಂ ಸೇವಕರಿಗೆ ಒಟ್ಟು ೧೨ದಿನಗಳ ಕಾಲ ತರಬೇತಿಯನ್ನು ನಿಯೋಜಿಸಲಾಗಿದ್ದು, ಸ್ವಯಂ ಸೇವಕರು ಸರಿಯಾಗಿ ತರಬೇತಿ ಪಡೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ರವೀಂದ್ರ ಘಾಟಗೆ, ಜಿಲ್ಲಾ ಹೋಮ್ ಗಾರ್ಡ್ ಕಂಮಾಡೆಂಟ್, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಜಿಲ್ಲಾ ವಿಪತ್ತು ಪರಿಣಿತ ವೆಂಕಟೇಶ ಬುಳ್ಳಾ ಸೇರಿದಂತೆ ೧೦೦ಜನ ಸ್ವಯಂ ಸೇವಕರು ತರಬೇತಿಯಲ್ಲಿ ಹಾಜರಿದ್ದರು.