ಸೇವೆ ಮಾಡುವ ಅವಕಾಶ ಸಿಕ್ಕಿದ್ದು ಪುಣ್ಯ: ಹುರಳಿ

ಬಾದಾಮಿ, ಏ 2: ನನ್ನ ಸೇವಾವಧಿಯಲ್ಲಿ ಬಾದಾಮಿ ತಾಲೂಕಿನಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿದ್ದು, ನನ್ನ ಪುಣ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ ಹೇಳಿದರು.
ಅವರು ಬುಧವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿಗೆ ವರ್ಗಾವಣೆಯಾದ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಸೇವೆಯಲ್ಲಿ ನನ್ನ ಕೈಲಾದಷ್ಟು ಒಳ್ಳೆಯದನ್ನು ಮಾಡಿದ್ದೇನೆ. ಇಲ್ಲಿನ ಜನರ ಪ್ರೀತಿ, ಸಹಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಪಿ.ಮಾಗಿ ಮಾತನಾಡಿ ಕಳೆದ 17 ತಿಂಗಳ ಅವಧಿಯಲ್ಲಿ ಅವರ ಸೇವೆ ತಾಲೂಕಿನ ಜನರಿಗೆ ನೀಡಿದ್ದಾರೆ. ಇನ್ನೂ ಕೆಲವು ದಿನ ಇಲ್ಲಿಯೇ ಇರಬೇಕಾಗಿತ್ತು. ತವರು ತಾಲೂಕಿಗೆ ವರ್ಗಾವಣೆಯಾಗಿರುವುದು ಸಂತೋಷ. ಇನ್ನೂ ಹೆಚ್ಚಿನ ಸೇವೆ ಮಾಡಲಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಬಿಇಒ ಕಚೇರಿ, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸಂಘ, ಅನುದಾನಿತ ಶಾಲಾ ಶಿಕ್ಷಕರ ಸಂಘ, ಖಾಸಗಿ ಶಾಲಾ ಆಡಳಿತ ಮಂಡಳಿ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಪಿ.ಮಾಗಿ, ಪ್ರೌಢಶಾಲಾ ಮುಖ್ಯಶಿಕ್ಷಕರಾದ ಬಿ.ಎಫ್.ಹೊರಕೇರಿ, ಎಚ್.ನಾಗರಾಜ, ಬಸವರಾಜ ಅಬ್ಬಿಗೇರಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಿವೇಕಾನಂದ ಮೇಟಿ, ಶಿಕ್ಷಣ ಸಂಯೋಜಕರಾದ ಹನಮಂತರಾಜು, ರವಿ ಗಿರಿಯಪ್ಪಗೌಡರ, ವಿ.ಎಸ್.ಹಿರೇಮಠ, ಎಸ್.ವೈ.ಮಡಿವಾಳರ, ಡಿ.ಬಿ.ಹಡಗಲಿ, ಬಿ.ಎನ್.ದ್ಯಾವನ್ನವರ, ಎಂ.ಎಚ್.ಮೂಲಿಮನಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರವಿ ಕಂಗಳ, ಎಸ್.ಎಸ್.ಯಲಿಗಾರ, ಬಿ.ಎಫ್.ಕುಂಬಾರ, ಅಧೀಕ್ಷಕ ವೆಂಕಟೇಶ ಇನಾಮದಾರ, ವ್ಯವಸ್ಥಾಪಕ ಪರಶುರಾಮ ಭಜಂತ್ರಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಎ.ಕೇಸರಿ, ಬಾದಾಮಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಭಂಡಾರಿ, ಪ್ರಧಾನ ಕಾರ್ಯದರ್ಶಿ ಎಚ್.ಎಂ.ಹರದೊಳ್ಳಿ, ಗುಳೇದಗುಡ್ಡ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಯಲಿಗಾರ, ಡಿ.ವೈ.ಹೊಸಮನಿ, ಪಿ.ಎಚ್.ಚಳಗೇರಿ, ಬಸಮ್ಮ ನರಸಾಪೂರ, ಸಂತೋಷ ಪಟ್ಟಣಶೆಟ್ಟಿ, ಜಗದೀಶ ಹಟ್ಟಿ, ಮಂಜುನಾಥ ಉಂಕಿ, ಎಚ್.ಎಂ.ಯತ್ನಟ್ಟಿ, ಡಿ.ಡಿ.ಬಾಗಲಕೋಟ, ಸುರೇಶ ಅರಳಿಮರದ, ಎನ್.ಡಿ.ಗೊರವರ, ವೈ.ಎಫ್.ಶರೀಫ, ಕೆ.ಬಿ.ಗೌಡರ, ಸೇರಿದಂತೆ ತಾಲೂಕಿನ ಶಿಕ್ಷಕರ ಬಳಗದವರು ಹಾಜರಿದ್ದರು.