ಸೇವೆ ಮಾಡಿ ಸಮಾಜದ ಋಣ ತೀರಿಸಿ: ಸಿದ್ದರಾಮಯ್ಯ

ಬಾದಾಮಿ, ನ14: ಸಮಾಜದಿಂದ ಸಂಪಾದನೆ ಮಾಡಿದ ಸ್ವಲ್ಪ ಭಾಗವನ್ನಾದರೂ ಸಮಾಜಕ್ಕೆ ಹಿಂದುರುಗಿಸಿ ಕೊಟ್ಟರೆ ಮಾತ್ರ ಸಮಾಜದ ಋಣ ತೀರಿಸಿದಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ಧರಾಮಯ್ಯ ಹೇಳಿದರು.
ಅವರು ಶನಿವಾರ ಪಟ್ಟಣದ ಹೊರವಲಯದ ಎಲ್.ಐ.ಸಿ.ಹತ್ತಿರ ನೂತನ ದಿಂ.ಬಸಮ್ಮ ಷಣ್ಮುಖಪ್ಪ ಹೊಸಗೌಡ್ರ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿರುವ ಬಡವರು, ದೀನದಲಿತರು ಮದುವೆ ಮಾಡಿಕೊಳ್ಳುವುದು ದೊಡ್ಡ ಸಾಹಸ. ಇಂತಹ ಸಂದರ್ಭಗಳಲ್ಲಿ ಯುವ ಮುಖಂಡ ಮಹೇಶ ಹೊಸಗೌಡ್ರ ಉಚಿತ ವಿವಾಹ ಮಾಡಿರುವುದು ಶ್ಲಾಘನೀಯ, ಸ್ವಾಗತಾರ್ಹ ಎಂದರು.
ನಾನು ಶಾಸಕ, ಮಂತ್ರಿ, ಮುಖ್ಯಮಂತ್ರಿ ಆಗಿರುವುದು ಜನರಿಂದ ಮತ್ತು ಸಮಾಜದಿಂದ ಎಂದು ನೆನಪಿಸಿಕೊಂಡರು. ಹಿರಿಯರು ಹಾಕಿದ ದಾರಿಯಲ್ಲಿ ನಡೆಯುವುದು ದೊಡ್ಡ ಕೆಲಸ. ತಂದೆ ತಾಯಿಯಲ್ಲಿರುವ ಒಳ್ಳೆಯ ಗುಣಗಳನ್ನು ಮುಂದುವರೆಸಿಕೊಂಡು ಹೋಗುವುದು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ.ಸಮಾಜದ ಋಣ ತೀರಿಸುವ ಕೆಲಸ ಮಾಡಿದ್ದಾರೆ. ಬರುವ ದಿನಗಳಲ್ಲಿ ಮಹೇಶ ಹೊಸಗೌಡ್ರ ಇಂತಹ ಸಾಮಾಜಿಕ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮಹೇಶ ಹೊಸಗೌಡ್ರ ಇವರ ತಾಯಿ ದಿಂ.ಬಸಮ್ಮಾ ತಂದೆ ಷಣ್ಮುಖಪ್ಪ ಇವರ ಮೂರ್ತಿ ಅನಾವರಣ ಮತ್ತು ಷಣ್ಮುಖಪ್ಪ ಹೊಸಗೌಡ್ರ ಇವರ ಸಂಸ್ಕತಣ ಗ್ರಂಥ ಶ್ರಮದ ಸಿರಿ ಬಿಡುಗಡೆಗೊಳಿಸಲಾಯಿತು.
ತಂದೆ, ತಾಯಿಗಳ ಮೂರ್ತಿಯನ್ನು ಹೆಬ್ಬಾಳ ಶಾಸಕ ಭೈರತಿ ಸುರೇಶ ಅನಾವರಣಗೊಳಿಸಿದರು. ಮೂರು ಸಾವಿರಮಠದ ಡಾ.ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಸಂಘಟಕ ಮಹೇಶ ಹೊಸಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯ ಮೇಲೆ ಹೆಬ್ಬಾಳ ಶಾಸಕ ಭೈರತಿ ಸುರೇಶ, ಶಾಸಕ ಆನಂದ ನ್ಯಾಮಗೌಡ, ತುರುವೆಕೇರೆ ಶಾಸಕ ಸುರೇಶ, ಮಾಜಿ ಸಚಿವ ಎಚ್.ವೈ.ಮೇಟಿ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಪುರಸಭೆ ಅಧ್ಯಕ್ಷ ಮಂಜು ಹೊಸಮನಿ, ಸದಸ್ಯ ರಾಜಮಹ್ಮದ ಬಾಗವಾನ, ಮುಖಂಡರಾದ ಶಿವಾನಂದ ಕುಳಗೇರಿ, ಪಿ.ಆರ್.ಗೌಡರ, ಡಾ.ಎಂ.ಜಿ.ಕಿತ್ತಲಿ, ರಕ್ಷಿತಾ ಈಟಿ, ರಾಮವ್ವ ಪೂಜಾರ, ಎಂ.ಬಿ.ಹಂಗರಗಿ, ರವೀಂದ್ರ ಕಲಬುರ್ಗಿ, ಹೊಳಬಸು ಶೆಟ್ಟರ, ಯುವಮುಖಂಡ ಭೀಮಸೇನ ಚಿಮ್ಮನಕಟ್ಟಿ, ಎಂ.ಡಿ.ಯಲಿಗಾರ, ಶ್ರೀ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು, ಗುಳೇದಗುಡ್ಡ ಒಪ್ಪತ್ತೇಶ್ವರಮಠದ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಸಿದ್ದನಕೊಳ್ಳದ ಶಿವಕುಮಾರ ಮಹಾಸ್ವಾಮಿಗಳು, ಗದ್ದನಕೇರಿಯ ಮಳೆರಾಜೇಂದ್ರಮಠದ ಮೌನೇಶ್ವರ ಮಹಾಸ್ವಾಮಿಗಳು, ಕೋಲಾರ ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ ದೇವರು, ನೀಲಾನಗರ ಬಂಜಾರಪೀಠದ ಕುಮಾರ ಮಹಾರಾಜರು, ಕಮತಗಿಯ ಡಾ.ಗಣೇಶ ಚಿತ್ರಗಾರ, ರಾಜ್ಯ ಪಿಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಮಹಾಂತೇಶ ಮಮದಾಪೂರ, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹೊನ್ನಯ್ಯ ಹಿರೇಮಠ, ಮುಖಂಡರಾದ ಹನಮಂತ ಮಾವಿನಮರದ, ಕೆ.ಬಿ.ಗೌಡರ, ಸೇರಿದಂತೆ ಇತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಮಹೇಶ ಹೊಸಗೌಡ್ರ ಇವರು ಸಿದ್ದರಾಮಯ್ಯ ಅವರಿಗೆ ಶ್ರೀಲಂಕಾದಿಂದ ತಂದ 24 ಕ್ಯಾರೆಟ್ ಚಿನ್ನದ ಭಾವಚಿತ್ರವನ್ನು ಅರ್ಪಿಸಿದರು. ನಿರೂಪಕಿ ಶೃತಿ ಕಿತ್ತೂರ ಸ್ವಾಗತಿಸಿದರು. ರವಿ ಕಂಗಳ ಕಾರ್ಯಕ್ರಮ ನಿರೂಪಿಸಿದರು.
ಸಾಮೂಹಿಕ ವಿವಾಹ: ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 16 ಜೋಡಿಗಳು ನವದಾಂಪತ್ಯಕ್ಕೆ ಕಾಲಿಟ್ಟರು.