ಸೇವೆ ಮತ್ತು ತ್ಯಾಗವನ್ನು ಜಗತ್ತು ಸ್ಮರಿಸುತ್ತದೆ :ಡಾ.ವೂಡೇ ಪಿ.ಕೃಷ್ಣ

ತಾಳಿಕೋಟೆ:ಜು.27: ಗ್ರಾಮೀಣ ಭಾರತವೇ ನಿಜವಾದ ಭಾರತವಾಗಿದೆ ಹಾಗೆಯೇ ಗ್ರಾಮೀಣ ಜನರ ಬದುಕು ಹಸನಾಗಬೇಕಾದರೆ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಸ್ವಚ್ಚ ಭಾರತ ಜಾಗೃತಿಯ ಜೊತೆಗೆ ಶ್ರಮದಾನವೆಂಬುದು ಬಹು ಮುಖ್ಯವಾಗಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ,ಬೆಂಗಳೂರು ಇದರ ಅಧ್ಯಕ್ಷರಾದ ನಾಡೋಜ ಡಾ.ವೂಡೇ ಪಿ.ಕೃಷ್ಣ ಅವರು ಹೇಳಿದರು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಸರ್ಕಾರದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಇಲಾಖೆ ಹಾಗೂ ಶ್ರೀ ಎಚ್.ಎಸ್.ಪಾಟೀಲ ಸ್ವತಂತ್ರ ಪಧವಿಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ನಡೆದ ಎನ್‍ಎಸ್‍ಎಸ್ ಶಿಬಿರಾರ್ಥಿಗಳಿಗೆ 4ನೇ ದಿನದ ಕಾರ್ಯಾಗಾರ ಹಾಗೂ ಶ್ರಮದಾನ ಶಿಬಿರದ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಸೇವೆ ಮತ್ತು ತ್ಯಾಗವನ್ನು ಯಾರು ಮಾಡುತ್ತಾರೋ ಅವರನ್ನು ಜಗತ್ತು ಸ್ಮರಿಸುತ್ತದೆ. ನಿಮ್ಮ ಚಿಂತನೆಗಳು ಯಾವಾಗಲೂ ಬಡವರ ಪರ, ರೈತರ ಪರ ಮತ್ತು ಹಳ್ಳಿಯ ಪರವಾಗಿರಬೇಕು. ಎನ್. ಎಸ್.ಎಸ್.ಶಿಬಿರವು ಗಾಂಧಿಯವರ ತತ್ವಗಳನ್ನು ಆಧರಿಸಿವೆ. ಪ್ರತಿಯೊಬ್ಬರೂ ನಿಸ್ವಾರ್ಥ ಭಾವದಿಂದ ಕೆಲಸ ಮಾಡಿದಾಗ ಮಾತ್ರ ದೇಶದ ಅಭಿವೃದ್ಧಿ ಹೊಂದಲು ಸಾಧ್ಯವೆಂದ ಅವರು ದೇಶ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ದಾನಗಳಲ್ಲೇ ಶ್ರೇಷ್ಠ ದಾನವಾದ ಶ್ರಮದಾನದ ಮೂಲಕ ದೇಶ ಸೇವೆ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಿರಿ ಎಂದು ಹೇಳಿದ ಅವರು ರೂರಲ್ ಇಂಡಿಯಾ ಇಸ್ ದಿ ರಿಯಲ್ ಇಂಡಿಯಾ ಎಂದು ಗಾಂಧಿಯವರು ಹೇಳಿದ ಮಾತನ್ನು ಸ್ಮರಿಸಿಕೊಂಡರು.

   ಇನ್ನೋರ್ವ ಅತಿಥಿಗಳಾದ ಖ್ಯಾತ ಸಾಹಿತಿಗಳಾದ ಬಿ.ಆರ್.ಪೆÇೀಲಿಸ್‍ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಮಾಡುವ ಪ್ರತಿ ಕಾರ್ಯವು ಜೀವನಕ್ಕೆ ದಾರಿ ತೋರಿಸುತ್ತದೆ ಅಲ್ಲದೇ ಸಮಾಜಕ್ಕೆ ಮಾದರಿಯಾಗುತ್ತದೆ ಎನ್.ಎಸ್.ಎಸ್. ಘಟಕ ಲೈಫ್ ಟೈಮ್ ವರ್ಕಶಾಪ್ ಆಗಿ ಕಾರ್ಯನಿರ್ವಹಿಸಬೇಕೆಂದರು.
   ಇನ್ನೋರ್ವ ಅತಿಥಿ ತಾಳಿಕೋಟೆ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆರ್.ಎಲ್.ಕೊಪ್ಪದ ಎನ್‍ಎಸ್‍ಎಸ್ ದೇಯೋದ್ದೇಶ ಮತ್ತು ಸದೃಢ ದೇಹದ ಜೊತೆ ಉತ್ತಮ ಆರೋಗ್ಯ ಕುರಿತು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
    ಸಾನಿದ್ಯ ವಹಿಸಿದ್ದ ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಎಲ್ಲರೂ ಬುದ್ಧ,ಬಸವ,ಗಾಂಧಿ, ಅಂಬೇಡ್ಕರ್ ಮುಂತಾದವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅವರ ಆದರ್ಶ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದ್ದು ಅವರಂತೆ ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತಹ ಸಾಧನೆ ಮಾಡಬೇಕೆಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ ಅವರು ಸುಂದರ ಪರಿಸರ ಕಲ್ಪನೆಯನ್ನು ವಿಧ್ಯಾರ್ಥಿಗಳು ಜೀವನದಲ್ಲಿ ಕಟ್ಟಿಕೊಳ್ಳುವ ಕುರಿತು ತಿಳಿ ಹೇಳಿದರು.
    ಪ್ರಾಚಾರ್ಯರಾದ ಶ್ರೀಮತಿ ಮಲ್ಲಮ್ಮ. ಎಸ್.ಬಿರಾದಾರ, ಶಿಕ್ಷಕ ಭೀಮಣ್ಣ ಅರಕೇರಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ ಪಾಟೀಲ, ಸುನೀಲ ಪಾಟೀಲ, ಕಿರಣ ಪಾಟೀಲ, ಪ್ರಾಚಾರ್ಯ ಅಶೋಕ ಕಟ್ಟಿ, ಎಸ್.ವ್ಹಿ.ಜಾಮಗೊಂಡಿ, ಎಸ್.ಸಿ.ಗುಡಗುಂಟಿ, ಎನ್.ಬಿ.ಪಾಟೀಲ, ಎಂ.ಎಸ್.ರಾಯಗೊಂಡ, ಎಸ್.ಬಿ.ಮಂಗ್ಯಾಳ, ವ್ಹಿ.ಎಚ್.ಘಟನೂರ, ಶ್ರೀಮತಿ ಎ.ಸಿ.ಗುಮಶೆಟ್ಟಿ, ಕುಮಾರಿ ಜ್ಯೋತಿ ಪೊಲೀಸ್‍ಪಾಟೀಲ, ಜೆ.ಎಂ.ಕೊಣ್ಣೂರ, ಮುತ್ತು ಬಿರಾದಾರ, ವಿಠ್ಠಲ ವಿಜಾಪೂರ, ಎಸ್.ಎಸ್.ಪಾಟೀಲ, ಕುಮಾರಿ ಆರ್.ಎಚ್.ಯರದಿಹಾಳ, ವ್ಹಿ.ಎಸ್.ಬಿರಾದಾರ, ಪ್ರಕಾಶ ಪಾಟೀಲ, ಆರ್.ಬಿ.ಪಾಟೀಲ, ಶ್ರೀಮತಿ ಎಸ್.ಬಿ.ಸಾತಕೇಡ, ಎಸ್.ಎಸ್.ಬಿದರಕುಂದಿ, ಶಿವು ನಾಯಕ, ಎಸ್.ಎಂ.ಸಜ್ಜನ, ಜಿ.ಎಸ್.ಹೆಸರೂರ, ಶ್ರೀಮತಿ ಸನಾ ಪಠಾಣ, ಎಸ್.ಎಂ.ಖಿಂಡಿಮನಿ, ಪ್ರಕಾಶ ವಾಲಿಕಾರ, ಮೊದಲಾದವರು ಇದ್ದರು.
ಪ್ರಕಾಶ ಪಾಟೀಲ ಸ್ವಾಗತಿಸಿದರು, ಬಿ.ಐ.ಹಿರೇಹೊಳಿ ನಿರೂಪಿಸಿದರು, ಎಸ್.ಸಿ.ಗುಡಗುಂಟಿ ವಂದಿಸಿದರು.