
ಭಾಲ್ಕಿ, ಏ 9:ತಾಲೂಕಿನ ಬರದಾಪುರ ಗ್ರಾಮದ ಶಿವರಾಜ ಪ್ರಭುರಾವ್ ನಿಜಲಿಂಗೆ ಅವರು ಭಾರತೀಯ ಸೇನೆಯಲ್ಲಿ 20 ವರ್ಷ ಸೇವೆಯನ್ನು ಸಲ್ಲಿಸಿ ತಮ್ಮ ತವರು ಊರಿಗೆ ಆಗಮಿಸಿದ್ದಾರೆ.
ಜಮ್ಮು ಕಾಶ್ಮೀರ, ಲೇಹ್, ಲಡಾಖ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ , ರಾಜಸ್ಥಾನ, ಪಂಜಾಬ್, ಹೀಗೆ ದೇಶದ ಅತ್ಯಂತ ಕಠಿಣ ಸ್ಥಳಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.
ಯೋಧ ಶಿವರಾಜ ಪ್ರಭುರಾವ್ ನಿಜಲಿಂಗೆ ಅವರು ತಮ್ಮ ಸೇವೆ ಪೂರೈಸಿ ಸ್ವಗ್ರಾಮಕ್ಕೆ ಮರಳಿದ್ದಕ್ಕಾಗಿ ಗ್ರಾಮಸ್ಥರು, ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.