ಸೇವೆ, ತ್ಯಾಗ ನಮ್ಮ ಉಸಿರಾಗಲಿ

ಧಾರವಾಡ,ಆ11: ಸೇವೆ, ಸಮರ್ಪಣೆ, ತ್ಯಾಗ ನಮ್ಮ ಉಸಿರಾಗಲಿ, ಅಂದಾಗ ಮಾತ್ರದೇಶ ಉಳಿಯುತ್ತದೆ, ಎತ್ತರಕ್ಕೆ ಬೆಳೆಯುತ್ತದೆ ಎಂದು ಮಾಜಿ ಸಂಸದ ಪ್ರೊ. ಐ. ಜಿ. ಸನದಿ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಕ್ಯಾಪ್ಟನ್ ಬಿ.ಸಿ.ಕಲ್ಮಠ ಸ್ಮಾರಕದತ್ತಿ ಅಂಗವಾಗಿ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿಖಿಲಾಫತ್ ಚಳುವಳಿಯ ಅಂಗವಾಗಿ ಹೋರಾಡಿ ಮಡಿದಧಾರವಾಡದ ವೀರರು' ಉಪನ್ಯಾಸಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದಅವರು, ಒಕ್ಕಟ್ಟು, ಭಾವೈಕ್ಯತೆ, ಶಿಸ್ತು ಇದ್ದಲ್ಲಿ ಬಾಳು ಬೆಳಕಾಗುತ್ತದೆ.ಮೊದಲುದೇಶ ಬದುಕಬೇಕು.ದಾನಕೊಡಬೇಕು. ಹಸಿದ ಮನುಷ್ಯನನ್ನು ಬದುಕಿಸುವ ಮನೋಭಾವ ಹೊಂದಿರಬೇಕು. ಖಿಲಾಫತ್ ಚಳುವಳಿ ಸ್ವರಾಜ್ಯದ ಕನಸು ನನಸಾಗುವುದುತಡವಾದರೂಅಡ್ಡಿಯಿಲ್ಲ. ಮೊದಲು ಹಿಂದೂ-ಮುಸ್ಲಿಂ ಒಂದಾಗಬೇಕೆಂಬ ಆಸೆ ಗಾಂಧೀಜಿಯವರದಾಗಿತ್ತು. ಕೋಮು ಸೌಹಾರ್ಧತೆ ಬಹಳ ಮುಖ್ಯ.ಬ್ರಿಟೀಷರಒಡೆದು ಆಳುವ ನೀತಿಯಿಂದ ಭಾರತಕ್ಕೆ ಬಹಳ ಧಕ್ಕೆಯಾಯಿತು.ಆಗಿನ ಸಂದರ್ಭದಲ್ಲಿಜನ ಸಾವಿಗೆ ಕಾಯುತ್ತಿರಲಿಲ್ಲ. ದೇಶಕ್ಕಾಗಿ ಸಾವಿಗೆ ಎದೆಯೊಡ್ಡುತ್ತಿದ್ದರು.ಆದ್ದರಿಂದಕೋಟಿಕೋಟಿಜನರ ಬಲಿದಾನದಿಂದ ಬಂದ ಸ್ವಾತಂತ್ರ್ಯದಘನತೆಯನ್ನುಕಾಪಾಡಬೇಕುಎಂದರು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿಖಿಲಾಫತ್ ಚಳುವಳಿಯ ಅಂಗವಾಗಿ ಹೋರಾಡಿ ಮಡಿದಧಾರವಾಡದ ವೀರರುಕುರಿತುಉಪನ್ಯಾಸ ನೀಡಿದ ಸಾಮಾಜಿಕಕಾರ್ಯಕರ್ತಉದಯಯಂಡಿಗೇರಿ, ಧಾರವಾಡಜಿಲ್ಲೆ ಪುಣ್ಯದ ನೆಲ, ಸರ್ವಸ್ವವನ್ನುತ್ಯಾಗ ಮಾಡಿ ಸಾಮಾನ್ಯಜನರೇ ಸೈನಿಕರಾಗಿದುಡಿದುದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟಿದ್ದು ನಮ್ಮ ಭಾಗ್ಯ. ಖಿಲಾಫತ್ ಚಳುವಳಿಯಲ್ಲಿ ಭಾಗವಹಿಸಿ ಹುತಾತ್ಮರಾದವರಲ್ಲಿಧಾರವಾಡದ ಮಲೀಕ ಸಾಬ ಬಿನ್ ಮರ್ದಾನಸಾಬ, ಗೌಸುಸಾಬ ಬಿನ್ ಖಾದರಸಾಬ, ಅಬ್ದುಲ್‍ಗಫಾರಚೌಕಧಾಯಿ ಪ್ರಮುಖರು.ಇವರ ಸ್ಮರಣೆಯಲ್ಲಿಧಾರವಾಡದಜಕಣಿ ಬಾವಿ ಹತ್ತಿರ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ಇಂದಿಗೂ ಕಾಣಬಹುದಾಗಿದೆ.ನಮ್ಮ ಹಿರಿಯರುಜಾತಿಯತೆ, ಮೂಢನಂಬಿಕೆ, ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಮತ್ತುಗ್ರಾಮ ಸ್ವರಾಜ್ಯದ ಕನಸು ಕಂಡವರು.ವ್ಯಸನಮುಕ್ತ ಭಾರತವನ್ನು ಮಾಡಲು ಹೋರಾಟ ನಡೆಸಿದವರು ಎಂದರು. ಅತಿಥಿಯಾಗಿಧಾರವಾಡ ಕ.ವಿ.ವಿ. ಗಾಂಧಿಅಧ್ಯಯನ ವಿಭಾಗದ ನಿಕಟಪೂರ್ವ ಮುಖ್ಯಸ್ಥ ಪ್ರೊ. ಶಿವಾನಂದ ಶೆಟ್ಟರ ಮಾತನಾಡಿ, ಒಟ್ಟು ಭಾರತ ಸ್ವಾತಂತ್ರ್ಯದ ಸಂದರ್ಭದಲ್ಲಿ ನಡೆದ ಚಳುವಳಿಗಳು ಗಾಂಧೀಜಿಯವರ ಅಹಿಂಸಾ ಮಾರ್ಗ, ಖಿಲಾಫತ್ ಚಳುವಳಿಯ ಸಂದರ್ಭ ವಿವರಿಸಿದರು. ಭಾರತದಲ್ಲಿ ಬ್ರಿಟೀಷ ಸಾಮ್ರಾಜ್ಯಶಾಹಿ ನಡೆಗಾಗಿಅವರ ವಿರುದ್ದದ ಹೋರಾಟ ಮಾತ್ರವಾಗಿರದೆ.ಧರ್ಮ, ಜಾತಿ, ವರ್ಣ, ಲಿಂಗಭೇದದ ವಿರುದ್ದವೂ ಹೊರಾಡಬೇಕಿತ್ತುಎನ್ನುತ್ತ ಸ್ವಾತಂತ್ರ್ಯ ಹೋರಾಟದಕಥೆಯನ್ನುಗಂಭೀರವಾಗಿ ಪರಿಣಾಮಕಾರಿಯಾಗಿ ನಿಭಾಯಿಸಲಿಲ್ಲ. ಸರಕಾರಗಳು ಶಿಕ್ಷಣ ವ್ಯವಸ್ಥೆಯೊಳಗೆ ಆ ಕೆಲಸ ಮಾಡಲಿಲ್ಲ. ತಾಳ್ಮೆಯಿಂದ ಕೇಳಿಸಿಕೊಳ್ಳುವ ಕೆಲಸ ಆಗುತ್ತಿಲ್ಲ. ಕೋಮು ಸೌಹಾರ್ಧತೆಗಾಗಿಆದ ಹೋರಾಟವನ್ನು ನೆನೆಯಬೇಕಿದೆ.ಇಂದಿಗೂ ಗಾಂಧೀಜಿಕಾಲದಕಾಂಗ್ರೆಸ್ ಬಾವಿಗಳು ನಮ್ಮ ಅನೇಕ ಹಳ್ಳಿಗಳಲ್ಲಿ ನೋಡ ಸಿಗುತ್ತದೆ.ವ್ಯಸನಮುಕ್ತ ಭಾರತವನ್ನಾಗಿಸುವ ಹೋರಾಟದಲ್ಲೂಅನೇಕರುಜೀವತೆತ್ತರುಎಂದರು. ವೇದಿಕೆ ಮೇಲೆ ಚಂದ್ರಕಾಂತ ಬೆಲ್ಲದ, ಸುವರ್ಣ ಹಿರೇಮಠಇದ್ದರು.ಸಿದ್ಧನಗೌಡ ಪಾಟೀಲ ದತ್ತಿದಾನಿಗಳ ಪರವಾಗಿ ಮಾತನಾಡಿದರು. ದತ್ತಿ ಅಂಗವಾಗಿ ಆಯೋಜಿಸಿದ್ದಸರಕಾರಗಳ ಉಚಿತ ಕೊಡುಗೆಗಳು ಸರಿಯೆ?’ ವಿಷಯದಕುರಿತು ಪ್ರಬಂಧ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರದೊಂದಿಗೆ ನಗದು ಬಹುಮಾನ ನೀಡಲಾಯಿತು.ಧಾರವಾಡದ ಸರಕಾರಿ ಪ್ರಥಮದರ್ಜೆಕಾಲೇಜಿನ ಕು.ಗೀತಾ ಶಶಿಕಾಂತ ಬಡಿಗೇರ ಹಾಗೂ ಧಾರವಾಡ ಹುರಕಡ್ಲಿಅಜ್ಜ ಕಾನೂನು ಮಹಾವಿದ್ಯಾಲಯ ಕು.ಬಸೀರ ಅಹ್ಮದ ಪ್ರಥಮ ಸ್ಥಾನ,ಧಾರವಾಡಕರ್ನಾಟಕ ಕಲಾ ಮಹಾವಿದ್ಯಾಲಯದ ಕು.ಮಂಜುನಾಥ ಎಂ. ಹಾಗೂ ಕು. ಫಕ್ಕಿರಮ್ಮ ಹ.ತೋಟದದ್ವಿತೀಯ ಸ್ಥಾನ ಮತ್ತುರಾಯಾಪೂರಎಸ್.ಜೆ.ಎಂ.ವಿ. ಮಹಾಂತ ಪ್ರಥಮದರ್ಜೆ ಕಲಾ ಮತ್ತು ವಾಣಿಜ್ಯ ವಿದ್ಯಾಲಯದ ಕು.ಅಂಜಲಿ ಜಿನ್ನಪ್ಪ ಹಾಗೂ ಧಾರವಾಡಕೆ.ಎಸ್. ಜಿಗಳೂರು ಕಲಾ ಮತ್ತುಎಸ್.ಎಂ.ಶೇಷಗಿರಿ ವಾಣಿಜ್ಯ ಮಹಿಳಾ ಕಾಲೇಜಿನ ಕು.ಪದ್ಮಾವತಿಜಿನ್ನಪ್ಪನವರತೃತೀಯ ಸ್ಥಾನ ಪಡೆದರು.ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು.
ಮಧುಮತಿ ಸಣಕಲ್ ಪ್ರಾರ್ಥಿಸಿದರು.ಶಂಕರ ಕುಂಬಿ ಸ್ವಾಗತಿಸಿದರು.ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ.ಹಿರೇಮಠ ನಿರೂಪಿಸಿದರು.ಡಾ. ಸಂಜೀವಕುಲಕರ್ಣಿ ವಂದಿಸಿದರು.
ಕಾರ್ಯಕ್ರಮದಲ್ಲಿಗುರು ಹಿರೇಮಠ, ಡಾ.ಧನವಂತ ಹಾಜವಗೋಳ, ಎಸ್.ವಿ. ಅಯ್ಯನಗೌಡರ, ಗುರುತಿಗಡಿ, ಡಾ.ಬಾಳಪ್ಪ ಚಿನಗುಡಿ, ಕಲ್ಮಠ ಪರಿವಾದವರು, ಬಂಧುಗಳು ಉಪಸ್ಥಿತರಿದ್ದರು.