ಸೇವೆಯ ಮೂಲಕ ಜೀವನದಲ್ಲಿ ನ್ಯಾಯಕೊಡಿಸಿ ಅರಿವು ನೆರವು ನೀಡಿ

ವಿಜಯಪುರ, ನ.10-ಜೀವನದಲ್ಲಿ ಶಿಸ್ತು, ಹಾಗೂ ತ್ಯಾಗ ಭಾವನೆಯ ಸೇವೆಯ ಮೂಲಕ ಅಗತ್ಯವಾದಜನರಿಗೆ ನ್ಯಾಯಕೊಡಿಸುವಲ್ಲಿ ಸ್ವಯಂ ಸೇವPರು ಮುಂದೆ ಬರಬೇಕೆಂದು ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ಎನ್ ನಾಯಕ ಕರೆಕೊಟ್ಟರು.
ಅವರು ವಿಜಯಪುರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಎಡಿಅರ್ ಸಂಕೀರ್ಣದಲ್ಲಿ ಸೋಮುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗು ಜಿಲ್ಲಾ ನ್ಯಾಯವಾದಿಗಳ ಸಂಘ ವಿಜಯಪುರಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಸೇವೆಗಳ ದಿನಾಚರಣೆ ಹಾಗೂ ಅರೆಕಾಲಿಕ ಸ್ವಯಂ ಸೇವಕರುಗಳಿಗೆ ಅಭಿಶಿಕ್ಷಣದ ಕಾರ್ಯಗಾರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸ್ವಯಂ ಸೇವಕರಾದವರು ಕಾನೂನು ಸೇವ ಪ್ರಾಧಿಕಾರದ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳಲು ಜನರಿಗೆಪ್ರೇರೇಪಿಸಬೇಕು ಮತ್ತುಉಚಿತವಾಗಿ ಸಿಗಲಿರುವ ಕಾನೂನು ಅದಾಲತ್, ಅರಿವು, ನೆರವು ಬಗ್ಗೆ ಜನರಲ್ಲಿ ತಿಳುವಳಿಕೆ ನೀಡಿ ನೊಂದಜನರಿಗೆ ನ್ಯಾಯವದಗಿಸಲು ನೆರವಾಗಬೇಕೆಂದು ನಾಯಕ ಹೇಳಿದರು.
ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ ಸ್ವಯಂ ಸೇವೆ ಮತ್ತು ಮದ್ಯಸ್ಥಿಕೆ ಇಲ್ಲದೇ ಯಾವುದೇ ನ್ಯಾಯ ಅಥವಾ ಕೆಲಸ ಮಾಡಲು ಅಸಾಧ್ಯ, ಅಖಂಡ ಭಾರತದ ಇತಿಹಾಸದಲ್ಲಿ ಸಂದಾನ ವಿಫಲವಾಗಿದ್ದರಿಂದಲೇ ದೊಡ್ಡ ಮಹಾಯುದ್ಧಗಳು ನಡೆದದ್ದು, ಬರಿ ಒಣ ಪ್ರತಿಷ್ಠೆಗೆ ಕೋರ್ಟು ಕಚೇರಿ ತುಳಿದು ಜಗಳ ಮಾಡಿಕೊಂಡಿದ್ದು, ಅಲ್ಲದೇ ಅದೆಷ್ಟೋ ಜನರು ಕಾನೂನು ಅರಿವು ನೆರವು ಪಡೆಯದೇ ಕಾನೂನು ಕೈಗೆ ತೆಗೆದುಕೊಂಡು ಬಲಿಯಾದದ್ದು ನಾವು ಓದಿದ್ದೇವೆ, ಸಂಧಾನ ವಿಫಲವಾದಾಗ ಮಾನವನ ಮನಸ್ಸು ಬದಲಾಗಿ ಅಪರಾಧಕ್ಕೆ ಪ್ರೇರೇಪಿಸುತ್ತದೆ ಅದ್ದರಿಂದಎಲ್ಲರೂ ಕಾನೂನು ಚೌಕಟ್ಟಿನಲ್ಲೇ ನ್ಯಾಯ ಪಡೆಯತಕ್ಕದ್ದು ಅದಕ್ಕಾಗಿ ಸ್ವಯಂ ಸೇವಕರು ಜನರಲ್ಲಿ ಕಾನೂನು ಪಾಲನೆ ಮತ್ತು ಕಾನುನಿನಡಿ ಇರುವ ತಮ್ಮ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಸಮಾಜದ ಸ್ವಾಸ್ತ್ಯ ಕಾಪಾಡಬೇಕು, ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಸಾರ್ವಜನಿಕರು ಶೀಘ್ರ ನ್ಯಾಯ ಪಡೆದು ನೆಮ್ಮದಿಯ ಬದುಕು ಸಾಗಿಸುವಂತೆ ಮಾಡಬೇಕು ಅದಕ್ಕಗಿ ಸ್ವಯಂ ಸೇವಕರು ಜನರ ಹಾಗೂ ಕಾನೂನು ಪ್ರಾಧಿಕಾರದ ನಡುವೆ ಸೇತುವೆಯಾಗಿ ಶ್ರಮಿಸಬೇಕೆಂದು ಉಪದೇಶಿಸಿದರು.
ಡಿ ವಾಯ್‍ಎಸ್ ಪಿ ಶ್ರೀಲಕ್ಷೀನಾರಾಯಣ ಅವರು ಮಾತನಾಡಿ ಎಲ್ಲರೂ ಕಾನೂನು ಪ್ರಕಾರ ನಡೆಯುವಂತೆ ಜನರಲ್ಲಿ ಜಾಗೃತಿ ಅಗತ್ಯವಾಗಿದೆ, ಕಾನುನು ಸೇವಾ ಪ್ರಾಧಿಕಾರದ ಅರಿವು ನೆರವು ಜನರು ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ವೆಂಕಣ್ಣ ಬಿ ಹೊಸಮನಿ ಅವರು ಮಾತನಾಡಿ ಸ್ವಯಂ ಸೇವಕರು ಕಾನೂನು ಅಂಶಗಳನ್ನು ತಿಳಿದುಕೊಂಡು ಇತರರಿಗು ಅದನ್ನು ತಿಳಿಸಬೇಕು, ಜನರಿಗೆ ಅನ್ಯಾಯವಾದಾಗ ಅವರು ಮಾನವ ಹಕ್ಕು ಕಾಪಾಡಲು ಸ್ವಯಂ ಸೇವಕರು ಸಿದ್ದರಿರಬೇಕು. ಕಾನೂನು ಸೇವೆಗಳ ಪ್ರಾಧಿಕಾರದ ಸೇವೆಯಲ್ಲಿರುವ ಪ್ಯಾರಾ ಲೀಗಲ್ ಸ್ವಯಂ ಸೇವಕರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಮ್‍ಎಸ್‍ಖಾಸನೀಸ್ ಇತರರು ಮಾತನಾಡಿದರು. ಶ್ರೀಮತಿ ನಮ್ರತಾ ಶ್ರೀಕಾಂತ ಹಿರೇಮಠ ನಿರೂಪಿಸಿ ವಂದಿಸಿದರು, ಶ್ರೀಮತಿ ಜಯಂತಿ ಸ್ವಾಗತಿಸಿದರು, ಚಂದ್ರಕಲಾ ಚಿತ್ತಾಪುರ, ಶ್ರೀಮತಿ ಅಂಜುಮ್ ಸುತಾರ್, ಎಮ್ ಸಿ ಲೋಗಾವಿ, ಬಿ,ಡಿ ರಾಠೋಡ್ ಮುಂತಾದವರು ಪಾಲ್ಗೊಂಡಿದ್ದರು.