ಸೇವೆಯಿಂದ ಪೌರಾಯುಕ್ತರ ಬಿಡುಗಡೆಗೆ ಒತ್ತಾಯ

(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಫೆ.೨೧-
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಯಾಗಿರುವ ನಗರಸಭೆ ಪೌರಾಯುಕ್ತರನ್ನು ತಕ್ಷಣ ಸೇವೆಯಿಂದ ಬಿಡುಗಡೆ ಮಾಡಬೇಕೆಂದು ಅಂದ್ರೂನ್ ಕಿಲ್ಲಾ ಮುಖಂಡ ಸೈಯದ್ ಶಂಶುದ್ದೀನ್ ಒತ್ತಾಯಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೌರಾಯುಕ್ತ ಗುರುಸಿದ್ದಯ್ಯರವರನ್ನು ವರ್ಗಾವಣೆ ಮಾಡಲಾಗಿದೆ. ಗುರುಸಿದ್ದಯ್ಯ ಅವರ
ಅಧಿಕಾರಾವಧಿಯಲ್ಲಿ ನಗರಸಭೆ ಆಡಳಿತ ವ್ಯವಸ್ಥೆ ಅಧೋಗತಿಗಿಳಿದಿದೆ. ಸರ್ಕಾರದ ಆದೇಶವಿದ್ದರೂ ಇದುವರೆಗೂ ಪೌರಾಯುಕ್ತ ಗುರುಸಿದ್ದಯ್ಯರವರನ್ನು ಸೇವೆಯಿಂದ ಇದುವರೆಗೂ ಬಿಡುಗಡೆಗೊಳಿಸಿಲ್ಲ ಎಂದು ಶಂಶುದ್ದೀನ್ ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡು ಪೌರಾಯುಕ್ತ ಗುರುಸಿದ್ದಯ್ಯ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಬೇಕು. ಇವರ ಬಿಡುಗಡೆ ವಿಳಂವಕ್ಕೆ ಸ್ಥಳೀಯರ ಬೆಂಬಲವಿರುವ ಕುರಿತು ಶಂಕೆ ಉಂಟಾಗಿದೆ.
ಸರ್ಕಾರದ ಆದೇಶದನ್ವಯ ಗುರುಸಿದ್ದಯ್ಯರವರನ್ನು ಸೇವೆಯಿಂದ ಬಿಡುಗಡೆಗೊಳಿಸದಿದ್ದರೆ ಸರ್ಕಾರದ ಆದೇಶ ಧಿಕ್ಕರಿಸಿದ ಜಿಲ್ಲಾಡಳಿತ ಘೋಷವಾಕ್ಯದೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಸೈಯದ್‌ಶಂಶುದ್ದೀನ್ ಮನವಿಂiiಲ್ಲಿ ಎಚ್ಚರಿಸಿದ್ದಾರೆ.