ಸೇವೆಯಿಂದ ನೆಮ್ಮದಿ ಸಾಧ್ಯ


ಹುಬ್ಬಳ್ಳಿ,ಎ.27: ಮನುಷ್ಯ ತನ್ನ ಬದುಕಿನ ಹೋರಾಟದ ಮಧ್ಯದಲ್ಲಿ ಮಾನವೀಯ ಸೇವೆ ಮಾಡುವದರಿಂದ ನೆಮ್ಮದಿ ಸಿಗಲು ಸಾಧ್ಯ ಎಂದು ಕಿಮ್ಸ್ ನಿರ್ದೇಶಕರಾದ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದರು.
ಕಿಮ್ಸ್ ಮಹಾವಿದ್ಯಾಲಯದ ಕೊರೊನಾ ವಿಭಾಗದ ಆವರಣದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಶುದ್ಧ, ನೀರು ಪೂರೈಕೆ ಸಮಾರಂಭದ ಅತಿಥಿಯಾಗಿ ಅವರು ಮಾತನಾಡಿದರು.
ಕೊರೊನಾ ರೋಗವನ್ನು ತಡೆಯಲು ಜನತೆಯ ಸಹಕಾರ ಅತೀ ಅವಶ್ಯ ಎಂದ ಅವರು ಇಂತಹ ಮಾನವೀಯ ಸೇವೆ ಇತರರಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ (ನಾರ್ಥ) ಅಧ್ಯಕ್ಷರಾದ ಆರ್.ಕೆ.ಸಿಂಗ ವಹಿಸಿದ್ದರು.
ಅತಿಥಿಗಳಾಗಿ ರಾಜೇಶ ತೋಳನವರ, ವಿಜಯ ಹಟ್ಟಿಹೊಳಿ, ಸುನೀಲ ಪೈ. ಜಿ.ಆರ್. ಕಲಮಠ, ಡಾ. ಲಕ್ಷ್ಮೀಕಾಂತ ಲೋಖರೆ ಡಾ. ರಾಜಶೇಖರ ದ್ಯಾಬೇರಿ, ಡಾ. ಮಹೇಶ, ಮಜೇಥಿಯಾ ಫೌಂಡೇಶನದ ಸಂಚಾಲಕರಾದ ಅಮರೇಶ ಹಿಪ್ಪರಗಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.