ಸೇವೆಯಿಂದ ನಿವೃತ್ತಿ ಹೊಂದಿದ ಹಿರೇಹಡ್ಲಿಗಿ ಮುಖ್ಯಗುರುವಿಗೆ ಬೀಳ್ಕೊಡುಗೆ

ಬಳ್ಳಾರಿ,ಎ.2: ತಾಲ್ಲೂಕಿನ ಹಿರೇಹಡ್ಲಿಗಿ ಗ್ರಾಮದ ಸ.ಹಿ.ಪ್ರಾ.ಶಾಲೆಯ ಹಿರಿಯ ಮಹ್ಮದ್ ಹನೀಫ್ ಸಾಹೇಬ್ ಅವರು ಸೇವೆಯಿಂದ ನಿವೃತ್ತಿ ಹೊಂದಿದ ಅಂಗವಾಗಿ ಅವರಿಗೆ ಬೀಳ್ಕೊಡಲಾಯಿತು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷ, ಸದಸ್ಯರು, ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು, ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಗಳ ಚುನಾಯಿತ ಪ್ರತಿನಿಧಿಗಳು, ಅಕ್ಕಪಕ್ಕದ ಶಾಲೆಗಳ ಶಿಕ್ಷಕರು, ವೃತ್ತಿಬಾಂಧವರು, ಸ್ನೇಹಿತರು, ಶಿಕ್ಷಣ ಪ್ರೇಮಿಗಳು, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಶಾಲಾ ಶಿಕ್ಷಕರು ಭಾಗವಹಿಸಿದ್ದರು.
ಮಹ್ಮದ್ ಹನೀಫ್ ಸಾಹೇಬ್ ಅವರ ಸರಳ ಸಜ್ಜನಿಕೆ ಹಾಗೂ ಅವರ ಪರೋಪಕಾರ ಗುಣ ಮತ್ತು ವಿದ್ಯಾರ್ಥಿಗಳ ಬಗ್ಗೆ ಅವರಿಗಿರುವ ಕಾಳಜಿ, ಸರ್ವರನ್ನೂ ಗೌರವಿಸುವ ಗುಣ ಮತ್ತು ಸಮಾಧಾನ ವ್ಯಕ್ತಿತ್ವದ ಬಗ್ಗೆ ಎಲ್ಲರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಶಿಕ್ಷಕರಾದ ಅಕ್ಬರ್‍ಬಾಷಾ, ಕೇಶವರೆಡ್ಡಿ, ಚಂದ್ರಶೇಖರ್ ತಿಪ್ಪೇಸ್ವಾಮಿ ಮೊದಲಾದವರು ಇದ್ದರು.