
ಸಂಜೆವಾಣಿ ವಾರ್ತೆ
ಸಿರಿಗೇರಿ ಏ.25. ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಪೂಜಾರ್ ನಾಗರಾಜ ಇವರು ತಮ್ಮ ಸೇವೆಯಲ್ಲಿ ಮುಂದುವರಿಯುವಂತೆ ಒತ್ತಾಯಿಸಿದ ಘಟನೆ ನಿನ್ನೆ ಸಂಜೆ ಸಿರಿಗೇರಿಯಲ್ಲಿ ನಡೆಯಿತು. ಕಳೆದ ಮೂರು ದಿನಗಳ ಹಿಂದೆ ತಮ್ಮ ಬಗ್ಗೆ ಬಳ್ಳಾರಿ ಧ್ವನಿ ಎಂಬ ಪತ್ರಿಕೆಯಲ್ಲಿ ಇಲ್ಲಸಲ್ಲದ ಆರೋಪಗಳಿಂದ ತಮ್ಮ ಬಗ್ಗೆ ಕೆಟ್ಟದಾಗಿ, ಸುಳ್ಳು ವರಧಿ ಮಾಡಿರುವುದರಿಂದ ಬೇಸತ್ತು ತಮ್ಮ ಗುತ್ತಿಗೆ ಆಧಾರದ ಸೇವೆಗೆ ರಾಜಿನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದ ಡಾ.ನಾಗರಾಜ್ ಎಂಬುವವರನ್ನು ಸ್ಥಳೀಯ ಮುಖಂಡರು, ಸಂಘಟನೆಗಳ ಮುಖಂಡರು ಸರ್ಕಾರಿ ಆಸ್ಪತ್ರೆ ಹತ್ತಿರ ಜಮಾವಣೆಗೊಂಡು ವೈದ್ಯರ ಮನವೊಲಿಸಿ ಸೇವೆಯಲ್ಲಿ ಮುಂದುವರಿಯುವಂತೆ ಧೈರ್ಯತುಂಬಿದರು. ದಿನನಿತ್ಯ ನೂರಾರು ರೋಗಿಗಳನ್ನು ನೋಡುವ ಉತ್ತಮ ಸೇವೆಯಲ್ಲಿ ತೊಡಗಿರುವ ನಿಮ್ಮ ಸೇವೆಯನ್ನು ಗಮನಿಸಲಾಗುತ್ತಿದೆ. ಯಾರೋ ತಮ್ಮವರಿಗೆ ಸರಿಯಾಗಿ ನೋಡಲಿಲ್ಲ ಎನ್ನುವ ವೈಯುಕ್ತಿಕ ಅಸಮಧಾನದಿಂದ ಪತ್ರಿಕೆಯಲ್ಲಿ ವರಧಿ ಮಾಡಿರುವುದು ತಪ್ಪು, ಮತ್ತು ಖಂಡನೀಯವಾಗಿದೆ. ಪತ್ರಿಕೆ ಆಧಾರದ ಮೇಲೆ ಮೇಲಧಿಕಾರಿಗಳು ವೈದ್ಯರ ಮೇಲೆ ಸಣ್ಣ ಕ್ರಮಕ್ಕೆ ಮುಂದಾದರೂ ಅದರ ವಿರುದ್ಧ ಆಸ್ಪತ್ರೆ ಮುಂದೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಮುಖಂಡರು ತಿಳಿಸಿದರಲ್ಲದೇ ಯಾವುದೇ ಕಾರಣಕ್ಕೂ ರಾಜಿನಾಮೆ ನೀಡುವ ಕೆಲಸ ಮಾಡಬಾರದು ನಿಮ್ಮ ಪರವಾಗಿ ಗ್ರಾಮಸ್ಥರಿದ್ದಾರೆ, ಸಂಘಟನೆಗಳ ಮುಖಂಡರು, ಗ್ರಾಮದ ಮುಖಂಡರು ನಿಲ್ಲುತ್ತಾರೆಂದು ತಿಳಿಸಿ ಸನ್ಮಾನಿಸಿದರು. ಗ್ರಾಮದ ಮುಖಂಡರಾದ ಡ್ರೈವರ್‍ಹುಲುಗಪ್ಪ, ಎಸ್.ಎಂ.ಅಡಿವೆಯ್ಯಸ್ವಾಮಿ, ಹಳ್ಳಿಮರದವೀರೇಶ್, ರಾರಾವಿವೆಂಕಟೇಶ, ಬಿಚಗತ್ತಿಮಲ್ಲಯ್ಯ, ಎಚ್.ಲಕ್ಷ್ಮಣ, ನೆನೆಕ್ಕಿ ವಿರುಪಾಕ್ಷಿ, ಆಟೋತಿಮ್ಮಯ್ಯ, ಗ್ರಾ.ಪಂ.ಸದಸ್ಯರಾದ ಗುಡಟ್ಟಿ ಈರಣ್ಣ, ಎಚ್.ಎರೆಪ್ಪ, ಎನ್.ಕರಿಬಸಪ್ಪ, ಕೆ.ವೀರೇಶ, ಸಲೀಮ್, ಮಾಜಿ ತಾ.ಪಂ.ಸದಸ್ಯ ವಿ.ರೇಣುಕಪ್ಪ, ಹಳ್ಳಿಮರದ ರುದ್ರಪ್ಪ, ಮಾಸ್ತಿದಾನಪ್ಪ, ಕೆ.ಷಣ್ಮೂಖ, ಚಾಂದ್‍ಬಾಷ, ಕೆ.ಕೊಮಾರೆಪ್ಪ, ಕೆ.ವೀರೇಶಪ್ಪ, ಗ್ರಾಮಸ್ಥರು ಪಾಲ್ಗೊಂಡಿದ್ದರು.