ಸೇವೆಗಳಿಗೆ ವಿಧಿಸಿದ್ದ ನಿಬರ್ಂಧ ಸಡಿಲಿಕೆ : ಜಿಲ್ಲಾಧಿಕಾರಿ ಆದೇಶ

ಹನೂರು: ಕೋವಿಡ್-19 ಹಿನ್ನೆಲೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಲವಾರು ಪೂಜಾ ಕೈಂಕರ್ಯಗಳು ಮತ್ತು ಸೇವೆಗಳಿಗೆ ವಿಧಿಸಿದ್ದ ನಿಬರ್ಂಧವನ್ನು ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಅಗ್ರ ಪಂಕ್ತಿಯಲ್ಲಿರುವ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕೋವಿಡ್-19 ಪ್ರಾರಂಭವಾದ ನಂತರ ಲಾಕ್‍ಡೌನ್ ಜಾರಿ ಮಾಡಲಾಗಿತ್ತು. ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಾವಳಿಗಳ ಅನುಸಾರ ದರ್ಶನಕ್ಕೆ ಮಾತ್ರ ಅವಕಾಸ ಕಲ್ಪಿಸಿ ಹಲವು ಪೂಜಾ ಕೈಂಕರ್ಯಗಳುಮತ್ತುಸೇವೆಗಳಿಗೆನಿಬರ್ಂಧವಿಧಿಸಲಾಗಿತ್ತು. ಈ ಪೈಕಿ ಕೆಲವುಸೇವೆಗಳಿಗೆಮತ್ತೆ ಅವಕಾಶ ಕಲ್ಪಿಸಲಾಗಿದ್ದು ಕೆಲಸೇವೆಗಳಿಗೆನಿಬರ್ಂಧವನ್ನುಮುಂದುವರೆಸಲಾಗಿದೆ.
ಯಾವ ಸೇವೆಗಳಿಗೆ ಮುಕ್ತ ಅವಕಾಶ: ಲಾಕ್‍ಡೌನ್ ತೆರವಾದ ನಂತರ ಬೆಳಿಗ್ಗೆ 7 ರಿಂದ ರಾತ್ರಿ 7ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಬೆಳಿಗ್ಗೆ 4 ಗಂಟೆ ಮತ್ತು ಸಂಜೆ 7ರ ವೇಳೆ ನಡೆಯುವ ಅಭಿμÉೀಕ ಪೂಜಾ ಕೈಂಕರ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ನಡೆಸುತ್ತಿದ್ದ ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ ಉತ್ಸವ ಸೇರಿದಂತೆ ಎಲ್ಲಾ ಉತ್ಸವಗಳಿಗೂ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳು ಹರಕೆ ಹೊತ್ತು ಸಮರ್ಪಿಸುತ್ತಿದ್ದ ಮುಡಿಸೇವಗೂ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳ ತಂಗುವಿಕೆಗಾಗಿ ವಿಧಿಸಲಾಗಿದ್ದ ನಿಬರ್ಂಧವನ್ನು ಸಡಿಲಿಕೆಗೊಳಿಸಿ ಕಾಟೇಜು, ಡಾರ್ಮಿಟರಿಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳ ತಂಗುವಿಕೆಗಾಗಿ ನೀಡುವ ಕೊಠಡಿಗಳ ಸ್ಯಾನಿಟೈಸ್ ಮತ್ತು ಶುದ್ಧೀಕರಣ ಮಾಡಲು ಈ ಹಿಂದೆ ನೀಡುತ್ತಿದ್ದ ಸ್ವಚ್ಛತೆ ಜೊತೆ ಹೆಚ್ಚುವರಿಯಾಗಿ 100ರೂ ವಿಧಿಸಲು ತೀರ್ಮಾನಿಸಲಾಗಿದೆ. ದೇವಾಲಯದ ವೆಬ್‍ಸೈಟ್ ಮೂಲಕ ನೀಡುತ್ತಿದ್ದ ಆನ್‍ಲೈನ್ ಸೇವೆಗಳನ್ನು ಪ್ರಾರಂಭಿಸಲಾಗಿದೆ.
ಯಾವುದೆಲ್ಲಾ ನಿμÉೀಧ : ನಿರ್ಬಂಧಗಳಲ್ಲಿ ಸಡಿಲಿಕೆ ಮಾಡಿರುವ ಜಿಲ್ಲಾಡಳಿತ ಕೆಲ ನಿμÉೀಧಗಳನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ. ದೇವಾಲಯಕ್ಕೆ 12 ವರ್ಷಕ್ಕಿಂತ ಕಿರಿಯರು ಮತ್ತು 65 ವಯಸ್ಸಿನವರಿಗಿಂತ ಹಿರಿಯರ ಪ್ರವೇಶವನ್ನು ನಿಬರ್ಂಧಿಸಿದೆ. ದೇವಾಲಯದ ಕೊಠಡಿ, ಡಾರ್ಮಿಡರಿ ಹೊರತುಪಡಿಸಿ ರಂಗಮಂದಿರ ಆವರಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ತಂಗುವಿಕೆಯನ್ನು ನಿರ್ಬಂಧಿಸಿದೆ. ದೇವಾಲಯದ ದಾಸೋಹ ಭವನದಲ್ಲಿ ದಾಸೋಹ ವ್ಯವಸ್ಥೆಗೆ ಇದ್ದ ನಿರ್ಬಂಧವನ್ನು ಮುಂದುವರೆಸಿ ತಿಂಡಿ ವಿತರಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಇನ್ನುಳಿದಂತೆ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಕಡ್ಡಾಯಗೊಳಿಸಿದ್ದು ದೇವಾಲಯದಲ್ಲಿ ಧ್ವನಿವರ್ಧಕ, ಸೂಚನಾ ಫಲಕಗಳಲ್ಲಿ ನೀಡುವ ಸೂಚನೆಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ.
ವಿಶೇಷ ಪ್ರಕಟಣೆ: ದೀಪಾವಳಿ ಜಾತ್ರೆ ರದ್ದಾಗುವ ಸಂಭವ ಇರುವುದರಿಂದ ಭಕ್ತಾಧಿಗಳ ಪ್ರವೇಶ (ಪ್ರಾಧಿಕಾರದ ವೆಬ್‍ಸೈಟ್ ಎಂಎಂಹಿಲ್ಸ್‍ಟೆಂಪಲ್.ಕಾಮ್) ರಲ್ಲಿ ಕೊಠಡಿಗಳ ಕಾಯ್ದಿರಿಸುವಿಕೆ ಹಾಗೂ ಸೇವೆಗಳ ಕಾಯ್ದಿರಿಸುವಿಕೆಯನ್ನು ಇದೇ ತಿಂಗಳ ನ.13 ರಿಂದ ನ.16 ರವರೆಗೆ ಸ್ಥಗಿತಗೊಳಿಸಲಾಗಿದೆ. ಉಳಿದ ದಿನಗಳಂದು ಸೇವೆಗಳ ಕಾಯ್ದಿರಿಸುವಿಕೆ ಎಂದಿನಂತೆ ಇರಲಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.