ಸೇವಾ ಸಂಗಮ ಸಂಸ್ಥೆಯಿಂದ ಮಹಿಳಾ ದಿನಾಚರಣೆ

ಕಲಬುರಗಿ,ಮಾ.19: ನಗರದ ಕನ್ನಡ ಭವನದಲ್ಲಿ ಸೇವಾ ಸಂಗಮ ಸಂಸ್ಧೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಕಲಬುರಗಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಬಿಷಪ್ ರಾಬರ್ಟ್ ಮಿರಾಂದ, ಸೇಂಟ್ ಮೇರಿ ಚರ್ಚ್ ಪ್ರಧಾನ ಗುರು ಫಾದರ್ ಜೋಸೆಫ್ ಪ್ರಮಿಣ, ಮುಖ್ಯ ಅತಿಥಿಗಳಾಗಿ ಲಕ್ಷ್ಮೀ ದತ್ತಾತ್ರೇಯ ಪಾಟೀಲ್‍ಅಧ್ಯಕ್ಷತೆಯನ್ನು ಸಿಸ್ಟರ್ ಪಿಲೋಮಿನಾ ಮಿನಜೆಸ್ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಲಕ್ಷ್ಮೀ ದತ್ತಾತ್ರೇಯ ಪಾಟೀಲ್ ಅವರು ಮಾತನಾಡಿ, ಪ್ರಸ್ತುತ ಸಮಯದಲ್ಲಿ ಮಹಿಳೆಯರು ಸಮಾಜದಲ್ಲಿರುವ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನ ಕಾರ್ಯಪ್ರವೃತಿಯ ಮೂಲಕ ಸಾಧನೆಯ ಶಿಖರವನ್ನು ಹತ್ತುತಿದ್ದಾಳೆ. ಜೊತೆಗೆ ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಇದರ ನಡುವೆ ಮಹಿಳೆಯರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಬಿಷಪ ರಾಬರ್ಟ ರವರು ಮಾತನಾಡಿ ರಾಷ್ಟ್ರಗಳ ಉಳಿವು-ಅಳಿವು ಹಾಗೂ ಏಳಿಗೆ ಅರಿಯಬೇಕಾದರೆ ಆ ರಾಷ್ಟ್ರದಲ್ಲಿ ಮಹಿಳೆಯ ಸ್ಧಾನ ಮಾನದ ಕುರಿತು ಅಧ್ಯಯನ ಮಾಡಿ ಆ ರಾಷ್ಟ್ರ ಯಾವ ಅಂಚಿನಲ್ಲಿದೆ ಎಂದು ಹೇಳಬಹುದು ಎಂದು ಹೇಳಿದರು.ನ್ಯಾಯವಾದಿ ಅಶ್ವಿನಿ ಮದನಕರ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಂಬತ್ತು ಮಂದಿ ಮಹಿಳೆಯನ್ನು ಮಹಿಳಾ ಸಾಧಕಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸೇವಾ ಸಂಗಮ ಸಂಸ್ಧೆ ನಿರ್ದೇಶಕ ಫಾದರ್ ವಿಕ್ಟರ್ ವಾಸ್, ಶರಣು ಪಪ್ಪಾ, ತೃಪ್ತಿ ಶ್ರೀನಿವಾಸ ಲಾಖೆ, ನೀಲಾಂಬಿಕಾ ಶೇರಿಕಾರ, ಡಾ.ಸಪ್ನ ಪಾಟೀಲ, ರೇಣುಕಾ ಸರಡಗಿ, ಫಾದರ್ ಸ್ಟ್ಯಾನಿ ಲೋಬೊ, ಫಾದರ್ ವಿನ್ಸೆಂಟ್ ಪಿರೇರಾ, ಫಾದರ್ ದೀಪಕ, ಮಹಾನಂದ ಸಿಂಗ, ಲಕ್ಷ್ಮೀ ಕುಪೆಂದ್ರ ಮತ್ತಿತರು ಉಪಸ್ಧಿತರಿದ್ದರು.ದಾಕ್ಷಾಯಿಣಿ ನಿರೂಪಿಸಿ, ಸ್ವಾತಿ ಸ್ವಾಗತಿಸಿ,ಶಿವಕಾಂತ ಅವರು ವಂದಿಸಿದರು.