ಸೇವಾ ವಾಹಿನಿ ಕಾರ್ಯಕ್ರಮಕ್ಕೆ ಚಾಲನೆ: ಟೆಂಗಿನಕಾಯಿ

ಹುಬ್ಬಳ್ಳಿ, ಮೇ29: ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವ ಕಾರಣ ಬಿಜೆಪಿಯಿಂದ ಸೇವಾ ವಾಹಿನಿ ಎಂಬ ಕಾರ್ಯಕ್ರಮವನ್ನು ಆರಂಭಿಸುತ್ತಿದೆ ಎಂದು ಬಿಜೆಪಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಹೇಳಿದರು.

ನಗರದ ಸರ್ಕ್ಯೂಟ್ ಹೌಸ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ 50 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕೋರೋನಾ ಜಾಗೃತಿ, ಮಾಸ್ಕ್, ಸ್ಯಾನಿಟೇಜನರ್ ವಿತರಣೆಯನ್ನು ಇಂದಿನಿಂದ ಮೂರು ದಿನಗಳ ಕಾಲ ವಿತರಿಸಲಿದ್ದಾರೆ. ಜತೆಗೆ ರಾಜ್ಯದಲ್ಲಿ ಸುಮಾರು 50 ಸಾವಿರ ಬಿಜೆಪಿ ಕಾರ್ಯಕರ್ತರು ರಕ್ತದಾನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಕ್ಸಿಜನ್ ಕೊರತೆ ಆಗದಂತೆ ಸಿಡಿ ಬಾಲ್ ಮಾಡಿ ಹಂಚುವ ಕಾರ್ಯ ಮಾಡಲಾಗುವುದು ಎಂದರು.

ರಾಷ್ಟ್ರ, ರಾಜ್ಯ ಹಾಗೂ ಬೂತ್ ಮಟ್ಟದಲ್ಲಿ 1500 ಕ್ಕೂ ಹೆಚ್ಚು ಸಭೆಗಳನ್ನು ಮಾಡಿ, ಕೋವಿಡ್ ನಿರ್ವಹಣೆಯ ಕಾರ್ಯತಂತ್ರ ರೂಪಿಸಿದ್ದಾರೆ. ಎಪ್ರೀಲ್ 28 ರಿಂದ ಕಾರ್ಯಕರ್ತರು ಸೇವೆಯಲ್ಲಿ ಕೊಡಗಿದ್ದು, 10 ಲಕ್ಷಕ್ಕೂ ಹೆಚ್ಚು ಮಾಸ್ಕ್, 1 ಲಕ್ಷ ಕ್ಕೂ ಹೆಚ್ಚು ಆಹಾರ ಕಿಟ್‍ಗಳನ್ನು ತಯಾರಿಸಿ ವಿತರಣೆ ಮಾಡಿದ್ದಾರೆ. ರೆಮಡಿಯರ್ 25.556, ವೆಂಟಿಲೇಟರ್ 5015, 100. ಕ್ಕೂ ಹೆಚ್ಚು ಆಯಂಬುಲೇನ್ಸ್ ದಿಂದ 6540 ಕೋವಿಡ್ ರೋಗಿಗಳಿಗೆ ಸೇವೆ ಒದಗಿಸಿದ್ದೇವೆ. 3480 ಜನರ ಶವ ಸಂಸ್ಕಾರ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ರವಿ ನಾಯಕ ಸೇರಿದಂತೆ ಮುಂತಾದವರು ಇದ್ದರು.