ಸೇವಾ ವಯೋ ನಿವೃತ್ತಿ ಶಿಕ್ಷಕಿ ಸುಶೀಲರಿಗೆ ಬೀಳ್ಕೊಡುಗೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.01: ನಗರದ ವೀ.ವಿ.ಸಂಘದ ಹೀರದ ಸೂಗಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 42 ವರ್ಷ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಸಹ ಶಿಕ್ಷಕಿ ಬಿ.ಸುಶೀಲ ಇವರಿಗೆ ನಿನ್ನೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ವೀ.ವಿ.ಸಂಘದ ಕಾರ್ಯದರ್ಶಿ ಹೆಚ್.ಎಂ.ಗುರುಸಿದ್ದಸ್ವಾಮಿ ಅವರ ಅಧ್ಯಕ್ಷತೆ ವಹಿಸಿ ನಿವೃತ್ತಿ ಶಿಕ್ಷಕಿಯ ಸರಳತೆಯನ್ನು ಜ್ಞಾಪಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಯಾಳ್ಪಿ ಮೇಟಿ ಪಂಪನಗೌಡ, ಸದಸ್ಯರು ನಿವೃತ್ತಿ ಶಿಕ್ಷಕಿ ಸರಳಕುಮಾರಿ, ಅಣ್ಣ ವಿರುಪಾಕ್ಷಪ್ಪ ಇವರುಗಳು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಗುರು ಅಕ್ಕಿ ಮರಿಸ್ವಾಮಿ ಸ್ವಾಗತಿಸಿ ನಿವೃತ್ತಿಯ ಸರಳ ವ್ಯಕ್ತಿತ್ವ ಕಾರ್ಯನಿಷ್ಠೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ನಿವೃತ್ತಿ ಹೊಂದಿ ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಬಿ.ಸುಶೀಲ ತಮ್ಮ ಸೇವೆಗೆ ಅವಕಾಶ ಕಲ್ಪಿಸಿದ ವೀ.ವಿ.ಸಂಘಕ್ಕೆ ವಂದನೆ ಸಲ್ಲಿಸಿದರು. ಶಿಕ್ಷಕಿ ಎಲ್.ಜಯಂತಿ ಪ್ರಾರ್ಥಿಸಿದರು. ಶಿಕ್ಷಕ ಟಿ.ಜಿತೇಂದ್ರ ನಿರೂಪಣೆ ಮಾಡಿದರು. ಕೆ.ಮೃತ್ಯುಂಜಯಿ ವಂದನೆ ಸಲ್ಲಿಸಿದರು.