
(ಸಂಜೆವಾಣಿ ವಾರ್ತೆ)
ಹುಮನಾಬಾದ್: ಜು.1:ಪಂಚಾಯತ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಬಸವರಾಜ ಗುರಣ್ಣ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನಲೆ ಹುಮನಾಬಾದ್ ಪಟ್ಟಣದ ಪಂಚಾಯತ ರಾಜ್ ಉಪ ವಿಭಾಗದ ಕಚೇರಿಯಲ್ಲಿ ಬಿಳಕ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಪಂಚಾಯತ ರಾಜ್ ಇಲಾಖೆ ಅಧಿಕಾರಿಗಳು ಹೂ ಮಾಲೆಗಳನ್ನು ಹಾಕಿ ಸನ್ಮಾನಿಸಿದ ಬಳಿಕ ಸಿಹಿ ವಿತರಿಸಿದರು.
ಬಳಿಕ ಸೇವಾ ವಯೋ ನಿವೃತ್ತಿ ಹೊಂದಿದ ಬಸವರಾಜ ಗುರಣ್ಣ ನಾತನಾಡಿ, ಸರಕಾರಿ ಹುದ್ದೆಗಳಲ್ಲಿ ವಯೋ ನಿವೃತ್ತಿಯನ್ನು ಹೊಂದಲೆಬೇಕು. ಆದರೆ ಸೇವಾ ಅವಧಿಯಲ್ಲಿ ನಾನು ಉತ್ತಮ ಸೇವೆ ಸಲ್ಲಿಸಿದ್ದೇನೆ ಸಂತೋಷ ನನಗಿದೆ. ಬಿಳ್ಕೋಡುಗೆ ಸಮಾರಂಭದಲ್ಲಿ ಸನ್ಮಾನ ಮಾಡುವ ಮೂಲಕ ತಾವೊಲ್ಲರು ತೋರಿದ ಪ್ರೀತಿ ವಾತ್ಸಲ್ಯಕ್ಕೆ ಎಂದಿಗೂ ಚಿರ ಋಣಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುಭಾಷ ವಾಗ್ಮಾರೆ, ಶ್ಯಾಮಸುಂದರ ಕಾಳೆಕರ್, ರೇವಣಸಿದ್ದಯ್ಯ ಸ್ವಾಮಿ, ಶರಣು ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ್ ಸಂಗಮಕರ್, ಅಲಿಂ ಜಮಾದಾರ, ಅಲ್ತಾಫ್ ರಸೂಲ್, ಧನರಾಜ ಪಾಟೀಲ್, ರಾಜಕುಮಾರ ಹೆಬ್ಬಾಳೆ, ಮಾಣಿಕ ನಾಗನಾಯಕ್, ವಿಜಯಕುಮಾರ ಜಮಾದಾರ್, ಓಂಕಾರ ಪಾಟೀಲ್, ವಿಜಯ ರೆಡ್ಡಿ ಸೇರಿ ಅನೇಕರಿದ್ದರು.