ಸೈದಾಪುರ:ಜು.1:ವೃತ್ತಿಯಲ್ಲಿ ಸೇವಾ ಮನೋಭಾವನೆಯೊಂದಿಗೆ ಕಾರ್ಯ ಮಾಡಿದರೆ ಪ್ರತಿಯೊಬ್ಬರು ನಮ್ಮನ್ನು ಗುರುತಿಸುವಂತೆ ಮಾಡುತ್ತದೆ ಎಂದು ಹಂಪಣ್ಣ ಸಜ್ಜನಶೆಟ್ಟಿ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಮಾದ್ವಾರ ಪಶು ಇಲಾಖೆಯಲ್ಲಿ ವಂಕಸಂಬ್ರ ಗ್ರಾಮದ ಹಿರಿಯ ಪಶು ವೈಧ್ಯಕೀಯ ಪರೀಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ವೀರಭದ್ರಪ್ಪ.ಎಸ್.ಕೋರಿ ಅವರು ಸಿಡ್ಲಗಟ್ಟ ತಾಲೂಕಿನ ಮೇಲೂರು ಪಶು ಆಸ್ಪತ್ರೆಗೆ ಜಾನುವಾರು ಅಧಿಕಾರಿಯಾಗಿ ಬಡ್ತಿ ಹೊಂದಿ ವರ್ಗಾವಣೆಗೊಂಡ ನಿಮಿತ್ತಾ ಗ್ರಾಮಸ್ಥರಿಂದ ಹಮ್ಮಿಕೊಂಡ ಬೀಳ್ಕೊಡಿಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸರಕಾರಿ ಸೇವೆಯಲ್ಲಿ ಕಾರ್ಯ ಮಾಡುವವರು ಈ ವಿದಧ ಗೌರವಕ್ಕೆ ಪಾತ್ರರಾಗುತ್ತಿರುವುದು ಅವರಲ್ಲಿನ ತಮ್ಮ ಕರ್ತವ್ಯ ಹಾಗೂ ಕಾರ್ಯದ ಮಹತ್ವ ತಿಳಿಸುವಂತಿದೆ. ಇವರ ಕೆಲಸ ಕಾರ್ಯಗಳು ಇತರರಿಗೆ ಮಾದರಿಯಾಗಬೇಕು. ಇನ್ನೂ ಹೆಚ್ಚಿನ ಸೇವೆ ಇವರಿಂದಾಗಲಿ ಎಂದು ಹಾರೈಸಿದರು.
ಸನ್ಮಾನಿತರಾಗಿ ವೀರಭದ್ರಪ್ಪ.ಎಸ್.ಕೋರಿ ಮಾತನಾಡಿ, ನನ್ನ ಇಲ್ಲಿನ ಉತ್ತಮ ಸೇವೆಗೆ ಗ್ರಾಮಸ್ಥರ ಸಹಕಾರ ಅತಿಮುಖ್ಯವಾಗಿದೆ. ಈ ವಿದಧ ಗೌರವ ನನ್ನ ಜವಬ್ದಾರಿ ಇನ್ನೂ ಹೆಚ್ಚಾಗುವಂತೆ ಮಾಡಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಯಪ್ಪ, ಅಯ್ಯಪ್ಪ, ಮಲ್ಲೇಶಿ, ಶಾಮಪ್ಪ, ಶಂಕ್ರಪ್ಪ ಕಾಳಗಿ, ದೇವಿಂದ್ರಪ್ಪ ಕಂಬಾರ, ಗಂಗಾಧರ, ಬಿಪಿಎಂ ಶಿವಶಾಂತರೆಡ್ಡಿ ಸೇರಿದಂತೆ ಇತರರಿದ್ದರು.