ಸೇವಾ ಮನೋಭಾವದ ರೆಡ್ ಕ್ರಾಸ್ ಸಂಸ್ಥೆ

ಹೊನ್ನಾಳಿ.ಡಿ.೨೬; ಭಾರತೀಯ ವಿದ್ಯಾ ಸಂಸ್ಥೆಯ ವತಿಯಿಂದ ಪಟ್ಟಣದಲ್ಲಿ ಜೂನಿಯರ್ ರೆಡ್ ಕ್ರಾಸ್ ಸಂಸ್ಥೆ ಸ್ಥಾಪಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸಲು ಅದು ಸಹಕಾರಿಯಾಗಿದೆ ಎಂದು ಭಾರತೀಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ.ಎಚ್.ಪಿ. ರಾಜ್‌ಕುಮಾರ್ ಹೇಳಿದರು.ಪಟ್ಟಣದಲ್ಲಿ  ಹಮ್ಮಿಕೊಂಡಿದ್ದ ಭಾರತೀಯ ವಿದ್ಯಾ ಸಂಸ್ಥೆಯ 34ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.ನಿರ್ದಿಷ್ಟ ಗುರಿ, , ಕಠಿಣ ಪರಿಶ್ರಮದಿಂದ ಯಾವುದೇ ಸಾಧನೆ ಮಾಡಬಹುದು ಎಂದ ಅವರು, ತಾಲೂಕಿನಲ್ಲಿ ಪ್ರಥಮ ಬಾರಿಗೆ “ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ ಶಿಕ್ಷಣ” ಎನ್ನುವ ಸಿದ್ಧಾಂತದಡಿ ಶಿಕ್ಷಣ ಸಂಸ್ಥೆಯನ್ನು ತೆರೆದು ಇಂದು ಗುಣಾತ್ಮಕ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಮೂಲಕ ಶಿಕ್ಷಣ ಇಲಾಖೆಯಿಂದಲೇ ನಮ್ಮ ಸಂಸ್ಥೆ ಶ್ಲಾಘನೆಗೆ ಒಳಗಾಗಿದೆ ಎಂದು ತಿಳಿಸಿದರು.ತಾಲೂಕಿನಲ್ಲಿಯೇ ಅನುದಾನಿತ ಶಿಕ್ಷಣ ಸಂಸ್ಥೆಗಳ ಪೈಕಿ ಭಾರತೀಯ ವಿದ್ಯಾ ಸಂಸ್ಥೆಯ ಪ್ರಾಥಮಿಕ ಶಾಲಾ ವಿಭಾಗ ಅತಿ ಹೆಚ್ಚಿನ ದಾಖಲಾತಿ ಹೊಂದಿದೆ. ಇದು ನಮ್ಮ ಹೆಮ್ಮೆ. ಸಂಸ್ಥೆ ಅಧಿಕಾರ ವಿಕೇಂದ್ರೀಕರಣದ ಮೂಲಕ ವಿವಿಧ ಸಮಿತಿಗಳನ್ನು ರಚಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು. ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಗಳಿಸಿದೆ. ಕನ್ನಡ ಮಾಧ್ಯಮ ಶಾಲೆ ಶೇ.93ರಷ್ಟು ಫಲಿತಾಂಶ ಗಳಿಸಿದೆ ಎಂದು ಹೇಳಿದರು.ಈ ಸಂಸ್ಥೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಅವಕಾಶ ನೀಡುತ್ತಿದೆ. ದೇಶದ ಸತ್ಪçಜೆಗಳನ್ನಾಗಿ ಮಾಡುವ ಮೂಲಕ ಇಲ್ಲಿನ ವಿದ್ಯಾರ್ಥಿಗಳು ದೇಶದ ಯಾವುದೇ ಮೂಲೆಯಲ್ಲಿ ಬದುಕಬಲ್ಲ ಜೀವನ ಕೌಶಲಗಳನ್ನು ಕೂಡ ಕಲಿಸಿಕೊಡಲಾಗುತ್ತಿದೆ. ಇದು ಮಾದರಿ ಶಾಲೆಯಾಗಿದೆ, ಸಾಂಸ್ಕೃತಿಕ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸುತ್ತಿದೆ ಎಂದರು.ಯೋಗ ತರಬೇತಿ: ಎರಡು ವರ್ಷಗಳ ಹಿಂದಿನಿAದ ಅಂದರೆ, 2017ರ ಜೂನ್ 21ರಿಂದ ಸಂಸ್ಥೆಯಲ್ಲಿ ಪತಂಜಲಿ ಯೋಗ ಕೇಂದ್ರದ ಪ್ರಕಾಶ್ ಹೆಬ್ಬಾರ್ ಅವರ ನೇತೃತ್ವದಲ್ಲಿ ಉಚಿತ ಯೋಗ ತರಬೇತಿ ಶಿಬಿರವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.2019-20ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಮಾದನಬಾವಿ ಗ್ರಾಮದ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಶಿಕ್ಷಕ ಕೆ.ವಿ. ಪ್ರಸನ್ನ ಪ್ರತಿಭಾ ಪುರಸ್ಕಾರಕ್ಕೆ ವಿನಿಯೋಗಿಸಲು ಸಂಸ್ಥೆಯ ಅಧ್ಯಕ್ಷ ಎಲ್.ಎಸ್. ವೈಶ್ಯರ್ ಅವರಿಗೆ 50 ಸಾವಿರ ರೂ.ಗಳ ಚೆಕ್ ನೀಡಿದರು. ಸಂಸ್ಥೆಯ ಅಧ್ಯಕ್ಷ ಎಲ್.ಎಸ್. ವೈಶ್ಯರ್, ಉಪಾಧ್ಯಕ್ಷ ಲಕ್ಷ÷್ಮಣ್‌ರಾವ್, ಸಹ ಕಾರ್ಯದರ್ಶಿ ಎಚ್. ಲಿಂಗಯ್ಯ, ಖಜಾಂಚಿ ಕೆ. ಸೋಮಶೇಖರಪ್ಪ, ನಿರ್ದೇಶಕರಾದ ಕೆ. ಹಾಲೇಶ್, ಕೆ. ಗಣೇಶ್, ಎಚ್.ಎಂ. ಅರುಣ್‌ಕುಮಾರ್, ಶಾಲೆಯ ಮುಖ್ಯ ಶಿಕ್ಷಕರಾದ ಆರ್. ತಿಮ್ಮೇಶ್, ದೇವೀರಮ್ಮ, ಸಿಬ್ಬಂದಿ, ಸಂಸ್ಥೆಯ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.