ಸೇವಾ ಮನೋಭಾವದಿಂದ ಜಾಗೃತಿ ಸಾಧ್ಯ

ಕೆಂಭಾವಿ:ಮಾ.11:ಯುವಕರಿಗೆ ಸೇವಾ ಮನೋಭಾವ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮಗಳು ಜಾಗೃತಿ ಮೂಡಿಸುತ್ತವೆ ಎಂದು ಮುಖಂಡ ಯಂಕನಗೌಡ ಪೆÇಲೀಸಪಾಟೀಲ ಹೇಳಿದರು.
ಪಟ್ಟಣದ ಸಮೀಪ ಪರಸನಹಳ್ಳಿಯ ಸದಾನಂದ ಬಾಬಾ ದೇವಸ್ಥಾನದಲ್ಲಿ ಸುರಪುರದ ಶ್ರೀ ಜನನಿ ಮಹಿಳಾ ಪದವಿ ಮಹಾ ವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿರುವ 2022-23 ನೆ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಎನ್‍ಎಸ್‍ಎಸ್‍ನಿಂದ ಯುವಕರಲ್ಲಿ ರಾಷ್ಟ್ರಪ್ರೇಮ, ಸ್ವಚ್ಛತೆಯ ಕುರಿತು ಅರಿವು, ಗ್ರಾಮೀಣ ಜನರ ಬದುಕು ಕುರಿತು ಅರಿವು ಮೂಡುತ್ತದೆ ಎಂದು ತಿಳಿಸಿದರು.
ಉಪನ್ಯಾಸಕ ತಿರುಪತಿ ಕೆಂಭಾವಿ ಪ್ರಾಸ್ತಾವಿಕ ಮಾತನಾಡಿದರು. ಮುಖಂಡ ಹಳ್ಳೆಪ್ಪಗೌಡ ಪೆÇಲೀಸಪಾಟೀಲ ಶಿಬಿರದ ಧ್ವಜಾರೋಹಣ ನೆರವೇರಿಸಿದರು. ಅರ್ಚಕ ಮಲ್ಲಣ್ಣ ಮುತ್ಯಾ ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ರಾಮು ಮೇಲಿನಮನಿ, ಮುದೆಪ್ಪ ಪೂಜಾರಿ, ರಾಯಪ್ಪ, ಎನ್‍ಎಸ್‍ಎಸ್ ಅಧಿಕಾರಿ ಆದಿಶೇಷ ನೀಲಗಾರ, ಬೀರಲಿಂಗ ದೇವತ್ಕಲ್, ಪ್ರಾಶುಂಪಾಲೆ ಬಸವರಾಜೇಶ್ವರಿ ಘಂಟಿ, ವೆಂಕಟೇಶ ಜಾಲಗಾರ, ಮಹೇಶಕುಮಾರ, ಅಂಬರೀಷ, ಶ್ರೀದೇವಿ ನಾಯಕ, ಶೃತಿಗೌಡ, ಬಾವಾಸಾಬ ನದಫ್ ಸೇರಿದಂತೆ ಇತರರಿದ್ದರು.
ಕುಮಾರಿ ರೇಖಾ ನಿರೂಪಿಸಿದರು. ಕುಮಾರಿ ಭೀಮಾಬಾಯಿ ವಂದಿಸಿದರು.