ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭ

ಕೊಟ್ಟೂರು ಅ 01 :ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಜಿಲ್ಲೆಯ ವಿವಿಧ ಶಾಖೆಗಳಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ ಎಂ.ಸಿದ್ದಲಿಂಗನಗೌಡ ಸೇವೆಯಿಂದ ನಿವೃತ್ತರಾದ ಪ್ರಯುಕ್ತ ಪಟ್ಟಣದ ಪಿಜಿಬಿಬ್ಯಾಂಕಿನ ಆವರಣದಲ್ಲಿಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ವೃತ್ತಿಯನ್ನು
ಪೂಜ್ಯಭಾವದಿಂದ ಸೇವೆಯಲ್ಲಿ ತೊಡಗಿಕೊಂಡಾಗ ನಮಗೂ, ನಮ್ಮ ವೃತ್ತಿಗೂ, ಹಾಗೂ ನಾವು ಸೇವೆಸಲ್ಲಿಸುವ ಕ್ಞೇತ್ರಕ್ಕೂ ಗೌರವ ಸಿಕ್ಕಿದಂತಾಗುತ್ತದೆ ಎಂದು ನಿವೃತ್ತ ವ್ಯವಸ್ಥಾಪಕ ಎಂ.ಸಿದ್ದಲಿಂಗನಗೌಡ ಹೇಳಿದರು. ಶಟ್ಟಿ ಮಲ್ಲಿಕಾರ್ಜುನ, ಪಟ್ಟಣದ ಗಣ್ಯರುಸೇರಿದಂತೆ ಸಿಬ್ಬಂದಿಗಳು ಉಪಸ್ಥಿತದ್ದರು.