ಸೇವಾ ನಿವೃತ್ತಿ ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ

ಚಿಂಚೋಳಿ,ಸೆ.10- ತಾಲೂಕಿನ ಗಡಿಲಿಂಗದಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚನ್ನೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಕಸ್ತೂರಿಬಾಯಿ ಪಡಶೆಟ್ಟಿ ಅವರು, (60 ವರ್ಷ ) ಸೇವಾ ನಿವೃತ್ತಿಯಾದ ಹಿನ್ನಲೆಯಲ್ಲಿ ಚನೂರು ಗ್ರಾಮದಲ್ಲಿ ಬೀಳ್ಕೊಡುವ ಸಮಾರಂಭ ಜರುಗಿತು.
ಗಡಿಲಿಂಗದಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೌರಿಶಂಕರ್ ಜಿ ಉಪ್ಪಿನ ಅವರು, ಕಸ್ತೂರಿಬಾಯಿ ಪಡಶೆಟ್ಟಿ ಅವರಿಗೆ ಶಾಲು ಹೊದಿಸಿ ಹೂವಿನ ಹಾರದೊಂದಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೌರಿಶಂಕರ್ ಜಿ ಉಪ್ಪಿನ, ಅವರು ಮಾತನಾಡಿ ಕಸ್ತೂರಿಬಾಯಿ ಪಡಶೆಟ್ಟಿಯವರು ಸುಮಾರು 39 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯರಾಗಿ ಚನೂರು ಗ್ರಾಮದಲ್ಲಿ ಒಳ್ಳೆಯ ಸೇವೆ ಸಲ್ಲಿಸಿದರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚನೂರು ಗ್ರಾಮದ ಮುಖಂಡರಾದ ಶೈಲೇಶ್ ಹುಲಿ ದಂಪತಿಗಳು ಮತ್ತು ಶಾಂತಕುಮಾರ್ ಹುಲಿ ದಂಪತಿಗಳು ಸೋಮಶೇಖರ್ ಹುಲಿ ದಂಪತಿಗಳು ಕೂಡ ಕಸ್ತೂರಿಬಾಯಿ ಪಡಶೆಟ್ಟಿ, ಸನ್ಮಾನ ಮಾಡಿದರು ಕಾರ್ಯಕ್ರಮದಲ್ಲಿ ಶಿವಕುಮಾರ ಪೆÇಲೀಸ್ ಪಾಟೀಲ. ಶ್ರೀಭೀಮಶಂಕರ್ ಹತ್ತಿ, ರೇವಣಸಿದ್ದಪ್ಪ ಕಲ್ಲೂರ್. ವಿಠ್ಠಲ್ ದೊಡ್ಮನಿ, ಮಲ್ಲಿಕ್ ಸಾಬ್. ಬಸವರಾಜ ಕಟ್ಟಿಮನಿ ಕಾಶೀ, ಎಲ್ಲ ಮಹನೀಯರು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಿದರು ಮತ್ತು ಅನೇಕ ಗ್ರಾಮದ ಮುಖಂಡರು ಪಾಲಕ ಪೆÇೀಷಕರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು