ಮಾನ್ವಿ ಜು ೨೭ :- ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳಿಗೆ ತಾ.,ಪಂ.ಇ.ಒ. ಎಂ,ಡಿ,ಸೈಯದ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಗೃಹ ಲಕ್ಷ್ಮೀ ಯೋಜನೆಯ ಅರ್ಜಿಗಳನ್ನು ಹಾಕಲಾಗುತ್ತಿದ್ದು ಗ್ರಾಮೀಣ ಭಾಗದ ಮಹಿಳಾ ಫಲಾನುಭವಿಗಳು ಪಡಿತರ ಚೀಟಿ, ಆದಾರ್ ಕಾರ್ಡ ಮತ್ತು ಬ್ಯಾಂಕ್ ಖಾತೆ ಸಂಖ್ಯೆಗಳನ್ನು ನೀಡಿದಲ್ಲಿ ಗಣಕಯಂತ್ರ ನಿರ್ವಹಕರು ತಮ್ಮ ಅರ್ಜಿಗಳನ್ನು ಗೃಹ ಲಕ್ಷ್ಮೀ ತಂತ್ರಾಂಶದ ಮೂಲಕ ಎಂಟ್ರೀ ಮಾಡಿದ ನಂತರ ಸಂಬಂಧಿಸಿದ ಫಲಾನುಭವಿಗಳ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರುತ್ತದೆ. ಈ ಒಟಿಪಿ ನಂಬರ್ ಅನ್ನು ಎಂಟ್ರೀ ಮಾಡಿದ ಕೂಡಲೇ ಫಲಾನುಭವಿಗಳಿಗೆ ಗೃಹ ಲಕ್ಷ್ಮೀ ಯೋಜನೆಯ ಮಂಜೂರಾತಿ ಅದೇಶ ಪತ್ರವನ್ನು ಯಾವುದೇ ಶುಲ್ಕವನ್ನು ಪಡೆಯದೆ ವಿತರಿಸಲಾಗುತ್ತದೆ ಎಂದು ತಿಳಿಸಿದರು
ತಾಲೂಕಿನ ಮದ್ಲಾಪೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಬಾಪೂಜಿ ಸೇವಾ ಕೇಂದ್ರ ವನ್ನು ಪರಿಶೀಲಿಸಿ ಪ್ರತಿದಿನ ೬೦ ಅರ್ಜಿಗಳು ಸ್ವೀಕರಿಸಲು ಸರ್ಕಾರದ ಅದೇಶ ವಿರುತ್ತದೆ. ಸದರಿ ಆದೇಶದಂತೆ ಅರ್ಜಿಗಳನ್ನು ಸ್ವೀಕರಿಸಿ, ಗೃಹ ಲಕ್ಷ್ಮೀ ಯೋಜನೆಯ ಮಂಜೂರಾತಿ ಅದೇಶ ಪತ್ರವನ್ನು ವಿತರಿಸಬೇಕು ಹಾಗೂ ತಮ್ಮ ಗ್ರಾಮ ಪಂಚಾಯತಿಯ ಗೃಹಲಕ್ಷಿ?ಮ ಯೋಜನೆಯ ತಂತ್ರಾಂಶದ ಪಾಸ್ ವಾರ್ಡ ಹಾಗೂ ಯೂಸರ್ ಐಡಿಯನ್ನು ಯಾವುದೇ ಖಾಸಗಿ ಕಂಪ್ಯೂಟರ್ ಕೇಂದ್ರಕ್ಕೆ ನೀಡಿದಲ್ಲಿ ಮತ್ತು ಫಲನುಭವಿಗಳಿಂದ ಅರ್ಜಿ ಸಲ್ಲಿಕೆಗೆ ಶುಲ್ಕವನ್ನು ಪಡೆದಲ್ಲಿ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾ.ಪಂ. ಪಿಡಿಒ ರವರಿಗೆ ಸೂಚನೆ ನೀಡಿದರು.
ತಾಲೂಕಿನ ಕಪಗಲ್ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿನ ಬಾಪೂಜಿ ಸೇವಾ ಕೇಂದ್ರವನ್ನು ಪರಿಶೀಲನೆ ನಡೆಸಿದರು.
ಪಂಚಾಯತ ರಾಜ್ ಇಲಾಖೆಯ ಎ.ಡಿ. ಹನುಮಂತಪ್ಪ, ಡಿಇಒ,ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಗಳು ಇದ್ದರು