ಸೇವಾವೃತ್ತಿಯ ಯಶಸ್ಸಿಗೆ  ಮೇಲಾಧಿಕಾರಿಗಳ ಸಲಹೆ ಸಹಕಾರ ಅಗತ್ಯ – ಗುರುಮೂರ್ತಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಆ. 1 :-  ಪ್ರತಿಯೊಬ್ಬ ನೌಕರರ ಸೇವಾವೃತ್ತಿ ಯಶಸ್ವಿಗೆ   ಮೇಲಾಧಿಕಾರಿಗಳ ಸಲಹೆ ಸೂಚನೆ ಮಾರ್ಗದರ್ಶನದ ಜೊತೆಗೆ ಅವರು ನೀಡುವ ಸಹಕಾರದಿಂದ ಉತ್ತಮ ಸೇವಾಕಾರ್ಯಕ್ಕೆ ದಾರಿಯಾಗಬಲ್ಲದು ಎಂದು  ಗುಪ್ತಚರ ಇಲಾಖೆಯ ವೃತ್ತಿಯಿಂದ ನಿವೃತ್ತಿ ಹೊಂದಿದ ಕೂಡ್ಲಿಗಿ  ಎಎಸ್ ಐ ಗುರುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶನಿವಾರ ವಿಜಯನಗರ ಜಿಲ್ಲಾ ಕೇಂದ್ರದ ಕೃಷ್ಣ ಟೂರಿಸ್ಟ್ ಹೋಂ ನಲ್ಲಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಪತ್ನಿ ಯಶೋಧ ಜೊತೆಯಾಗಿ ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡುತ್ತ 1993 ರಿಂದ ಪೊಲೀಸ್ ವೃತ್ತಿಜೀವನಕ್ಕೆ ಕಾಲಿಟ್ಟು ಸಂಡೂರು ಠಾಣಾ ವ್ಯಾಪ್ತಿಯಲ್ಲಿ ಮೊದಲ ವೃತ್ತಿ ಮುಗಿಸಿಕೊಂಡು ನಂತರ ಕೂಡ್ಲಿಗಿ ಹಾಗೂ ಇತರೆಡೆ ಕಾರ್ಯನಿರ್ವಹಿಸಿ 2012 ರಿಂದ ಗುಪ್ತಚರ ಇಲಾಖೆಯ ಸೇವೆಗೆ ಹಾಜರಾಗಿದ್ದು ಅಲ್ಲಿಂದ ಇಲ್ಲಿಯವರೆಗಿನ  ಸೇವಾಕಾರ್ಯ ನನಗೆ ಅತೀವ ಸಂತಸ ತಂದಿದೆ ಅಲ್ಲದೆ ನಾನು ಪೊಲೀಸ್ ವೃತ್ತಿ ಆರಂಭದಲ್ಲಿ ತೋರಣಗಲ್ಲು ಪಿಎಸ್ಐಯಾಗಿದ್ದ ಬಿ ಎಸ್ ತಳವಾರ್  ನನಗೆ ಮಾರ್ಗದರ್ಶಕರಾಗಿದ್ದು ಅವರಿಗೆ ನಾನೆಂದು ಆಭಾರಿಯಾಗಿದ್ದೇನೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಗುಪ್ತಚರ ಇಲಾಖೆಯ ಬಳ್ಳಾರಿ ಸಹಾಯಕ ನಿರ್ದೇಶಕ  ಬಿ ಎಸ್ ತಳವಾರ್ ಮಾತನಾಡಿ ಸೇವೆಯಿಂದ ನಿವೃತ್ತಿ ಹೊಂದಿರುವ ಗುರುಮೂರ್ತಿಯವರು ತಮ್ಮ ಸೇವೆಯನ್ನು ನಿಷ್ಠೆ, ಸಂಯಮದಿಂದ ನಿಭಾಯಿಸಿಕೊಂಡು ಹೋಗುವ ಜೊತೆಗೆ ಗುಪ್ತ ಮಾಹಿತಿ ನೀಡುವಲ್ಲಿ ಹೆಚ್ಚಿನ ಶ್ರಮವಹಿಸುತ್ತಿದ್ದರು ಸರ್ಕಾರದ ಕೆಲಸ ದೇವರ ಕೆಲಸ ಎಂಬ ನಿಟ್ಟಿನಲ್ಲಿ ಸಾಗಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಮ್ಮ ಸೇವಾ ವೃತ್ತಿ ಮುಗಿಸಿ ವಯೋ ನಿವೃತ್ತಿ ಹೊಂದಿದ್ದು ಅವರ ವೃತ್ತಿ ಜೀವನ ಸುಖವಾಗಿರಲಿ ಎಂದು ಶುಭಹಾರೈಸಿದರು.
ವಿಜಯನಗರ ಜಿಲ್ಲೆಯ ಮುಖ್ಯ ಗುಪ್ತಚರ ಅಧಿಕಾರಿ ಶ್ರೀಶೈಲಕುಮಾರ, ಕೂಡ್ಲಿಗಿ ನ್ಯಾಯಾಂಗ ಇಲಾಖೆಯ ಅಪರ ಸರ್ಕಾರಿ ವಕೀಲರಾದ ಶಿವಪ್ರಸಾದ್, ರೈತಸಂಘದ ದೇವರಮನೆ ಮಹೇಶ, ಬಾರಿ ಮಹಾಂತೇಶ್, ಶಿಕ್ಷಕ ಹುಸೇನಪೀರ ಇತರರು ಮಾತನಾಡಿದರು.
 ಪತ್ನಿ ಯಶೋಧ, ಮಕ್ಕಳಾದ ಸಂಗೀತಾ, ಅಳಿಯ ಇಂಜಿನಿಯರ್ ಸಂದೀಪ, ಸರಳಾ, ಪ್ರವೀಣ್  ಮತ್ತು ಇಲಾಖೆಯ ಗುಪ್ತಚರ ತನಿಖಾಧಿಕಾರಿ ಪ್ರತಿಭಾ, ಉಪನ್ಯಾಸಕ ದೇವಪ್ಪ, ಬಿಜೆಪಿ ಮುಖಂಡ ಸೂರ್ಯಪಾಪಣ್ಣ, ಕೊಟ್ಟೂರು ರಾಜಣ್ಣ, ವಕೀಲರಾದ ಸೀತಾರಾಮಗೌಡ, ಸೀನಪ್ಪ ಕುಬೇರ, ಪ್ರಕಾಶ,  ಗುಪ್ತಚರ ಇಲಾಖೆಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು, ಸ್ನೇಹಿತರು ಉಪಸ್ಥಿತರಿದ್ದರು.

Attachments area