ಮಾಲೂರ.ಅ೨೬:ಸರ್ಕಾರಿ ಸೇವೆಗೆ ಸೇರಿದ ಮೇಲೆ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆ ಗಳಾಗಿರುತ್ತದೆ ಆದರೆ ನಮ್ಮ ಸೇವಾ ಅವಧಿಯಲ್ಲಿ ಮಾಡಿರುವ ಕೆಲಸ ಕಾರ್ಯಗಳು ಶಾಶ್ವತವಾಗಿರುತ್ತದೆ ಎಂದು ನಿರ್ಗಮಿತ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಬಿಪಿ ಚಂದ್ರಪ್ಪ ಹೇಳಿದರು
ಪಟ್ಟಣದ ಕೃಷಿ ಇಲಾಖೆಯ ಸಭಾಂಗಣದಲ್ಲಿ ಕೃಷಿ ಸಾಮಗ್ರಿ ಪರಿಕರ ಮಾರಾಟಗಾರರ ಅಭಿವೃದ್ಧಿ ಸಂಘ ಸಂಘ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು
ಇಲಾಖೆಯ ಕಚೇರಿಯಲ್ಲಿ ಸಿಬ್ಬಂದಿ ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಸರ್ಕಾರಿ ಕೆಲಸ ನಿರ್ವಹಿಸಲು ಸಿಬ್ಬಂದಿ ಹಾಗೂ ಎ ಓ ಗಳು ಆತ್ಮ ಸಿಬ್ಬಂದಿ ಮೇಲೆ ಸೇವಾ ಅವಧಿಯಲ್ಲಿ ಒತ್ತಡ ಏರಿರಬಹುದು ಅದು ಕೆಲಸಕ್ಕಾಗಿ ಮಾತ್ರ ಯಾರು ಸಹ ಬೇಸರ ಪಡುವಂತಿಲ್ಲ ರೈತ ಮುಖಂಡರು ರೈತರು ಕ್ರೀಡಾ ಮನೋಭಾವವನ್ನು ಬಳಸಿಕೊಂಡು ತಾಂತ್ರಿಕತೆ ಹಾಗೂ ಹೊಸ ಹೊಸ ಕೃಷಿ ಪದ್ಧತಿಗಳನ್ನು ಬಳಸಿಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಕೃಷಿ ಮಾರಾಟಗಾರರು ಉತ್ತಮ ಔಷಧಿ ಬಿತ್ತನೆ ಬೀಜಗಳು ನೀಡಬೇಕು ಏಕೆಂದರೆ ನಾವು ಸೇವಿಸುವ ಆಹಾರದಲ್ಲಿ ಆರ್ಬಿ ಸೈಟ್ಸ್ ನಿಂದ ಕ್ಯಾನ್ಸರ್ ಕಾರಕ ಮಕ್ಕಳಾಗದ ಬಂಜೆತನ ಬರಬಹುದಾಗಿದೆ ನೀರು ಹಿತಮಿತವಾಗಿ ಬಳಸಿ ಇಂಗಿಸಿ ಅದನ್ನು ಬಳಸಬೇಕು ಬೇರೆ ಇಲಾಖೆಗಳು ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ನೀಡಿದ್ದರಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು ಎಂದರು.
ಕೃಷಿ ಸಾಮಗ್ರಿ ಪರಿಕರ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಸಿಪಿ ನಾಗರಾಜ್ ಮಾತನಾಡಿ ಶಿಸ್ತಿನ ಸಿಪಾಯಿ ರೈತರ ಕೃಷಿ ಚಟುವಟಿಕೆಗಳಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದ ಚಂದ್ರಪ್ಪ ಅವರು ಮಾರ್ಗದರ್ಶನ ನೀಡಿ ಕೃಷಿ ಸಾಮಗ್ರಿ ಪರಿಕರಗಳನ್ನು ಕಾನೂನು ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಮಾರ್ಗದರ್ಶನ ನೀಡುತ್ತಿದ್ದರು ಪ್ರಸ್ತುತ ಮಾರಾಟಗಾರರು ಶಿಸ್ತಾಗಿ ಕಾನೂನು ವ್ಯಾಪ್ತಿಯಲ್ಲಿ ಕೃಷಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದಾರೆ
ಅತ್ಯಂತ ಹೆಚ್ಚು ವಿಷಯ ತಜ್ಞರು ಜ್ಞಾನ ಉಳ್ಳವರು ಸರಳ ವ್ಯಕ್ತಿತ್ವದ ಶಿಸ್ತಿನ ಸಿಪಾಯಿ ಕಟ್ಟ ಕಡೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಸಹಾಯಕ ಕೃಷಿ ನಿರ್ದೇಶಕ ಬಿಪಿ ಚಂದ್ರಪ್ಪ ಹಾಗೂ ತಾಂತ್ರಿಕ ಅಧಿಕಾರಿ ರಾಘವೇಂದ್ರ ಅವರನ್ನು ಕೃಷಿ ಸಾಮಗ್ರಿ ಪರಿಕರ ಮಾರಾಟಗಾರರ ಸಂಘ ಹಾಗೂ ಕೃಷಿ ಇಲಾಖೆ ವತಿಯಿಂದ ಅಭಿನಂದಿಸಿ ಬೀಳ್ಕೊಡುಗೆ ನೀಡಿದರು
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮಂಜುನಾಥ್ ರೈತ ಸಂಘದ ಅಧ್ಯಕ್ಷ ನರಸಿಂಹಯ್ಯ ಕೃಷಿ ಇಲಾಖೆಯ ಕಚೇರಿ ಮೇಲ್ವಿಚಾರಕಿ ಅನುಷಾಎ ಒ ಗಳಾದ ರಾಘವೇಂದ್ರ ಅಶ್ವಿನಿ ಬಸವರಾಜ್ ಕೃಷಿ ಸಾಮಗ್ರಿ ಮಾರಾಟಗಾರರ ಸಂಘದ ಕಾರ್ಯದರ್ಶಿ ಪಿರ್ದೋಸ್ ಸಂಘದ ಸದಸ್ಯರುಗಳಾದ ಡಿಕೆ ನಾಗರಾಜ್ ಶ್ರೀನಿವಾಸ್ ಗುಟ್ಟಪ್ಪ ಮುರುಳಿ ನಾರಾಯಣಸ್ವಾಮಿ ಎನ್ ಆರ್ ಗುಪ್ತ ತಿಮ್ಮರಾಯಸ್ವಾಮಿ ಅಶೋಕ್ ಹರೀಶ್ ರೆಡ್ಡಿ ಶ್ರೀನಿವಾಸ್ ಚಂದ್ರಪ್ಪ ಸುಬ್ಬಣ್ಣ ಇನ್ನಿತರರು ಹಾಜರಿದ್ದರು