ಸೇವಾವಧಿಯ ಜನಮುಖಿ ಸೇವೆ ಕಾರ್ಯ ಅನುಕರಣೀಯ: ಡಾ.ಪೆರ್ಲ

ಕಲಬುರಗಿ,ಜ.16:ವೃತ್ತಿಗೆ ಸೇರಿದ ಒಬ್ಬ ವ್ಯಕ್ತಿ ತನ್ನ ಕೆಲಸವನ್ನು ಕರ್ತವ್ಯವೆಂದು ನಂಬಿ ಸೇವಾ ಅವಧಿಯಲ್ಲಿ ಜನಮುಖಿ ಕಾರ್ಯ ಮಾಡಿದರೆ ಅಂಥವರನ್ನು ಎಲ್ಲರೂ ಶಾಶ್ವತವಾಗಿ ಸ್ಮರಿಸುತ್ತೇವೆ ಎಂದು ಕಲ್ಬುರ್ಗಿ ಆಕಾಶವಾಣಿಯ ಕಾರ್ಯಕ್ರಮ ವಿಭಾಗದ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಹೇಳಿದರು
ಜನವರಿ 9ರಂದು ಕಲಬುರ್ಗಿ ಆಕಾಶವಾಣಿಯಲ್ಲಿ ಸೇವೆಯಿಂದ ನಿವೃತ್ತಿಯಾಗುತ್ತಿರುವ ಕಾರ್ಯಕ್ರಮ ನಿರ್ವಾಹಕರಾದ ಅನಿಲ್ ಕುಮಾರ್ ಎಚ್ ಎನ್ ಮತ್ತು ಲೆಕ್ಕಾಧಿಕಾರಿ ವಿಜಯಕುಮಾರ್ ಅವರ ಬೀಳ್ಕೊಡುಗೆ ಹಾಗೂ ಆಡಳಿತ ಅಧಿಕಾರಿ ಸೈಯದ್ ಅಬ್ದುಲ್ ಖತೀಬ್ ಅಸ್ತ್ರರ್ ವರ್ಗಾವಣೆ ಮುಂಬೈಗೆ ವರ್ಗಾವಣೆ ಹಾಗೂ ತಾಂತ್ರಿಕ ವಿಭಾಗ ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿದ ಸಂಜೀವ್ ಮಿರ್ಜಿ ಅಭಿನಂದನೆ – ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸೇವೆಯಲ್ಲಿ ಎಷ್ಟು ಸಮಯ ಇದ್ದರೂ ಎಂಬುದು ಮುಖ್ಯವಲ್ಲ ಅವರ ಸೇವೆ ನಾಡಿನ ಜನತೆಗೆ ಎಷ್ಟು ಫಲಪ್ರದವಾಗಿತ್ತು ಮತ್ತು ಅದರಿಂದ ಪರಿಣಾಮಕಾರಿ ಬದಲಾವಣೆಗೆ ಹೇಗೆ ಕಾರಣವಾಗಿದೆಯೇ ಎಂಬುದನ್ನು ಜನರು ಗುರುತಿಸುತ್ತಾರೆ ಆ ಹಿನ್ನೆಲೆಯಲ್ಲಿ ವೃತ್ತಿಯಲ್ಲಿ ದುಡಿದು ನಿವೃತ್ತಿಯ ಸಂದರ್ಭದಲ್ಲಿ ಒಂದು ಆತ್ಮ ತೃಪ್ತಿಯ ಭಾವವನ್ನು ಹೊಂದುತ್ತೇವೆ ಎಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯಕ ಅಭಿಯಂತರದ ಜಿ ಗುರುಮೂರ್ತಿಯವರು ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಭು ನಿಷ್ಟಿ, ಜಿ ಕುಲಕರ್ಣಿ ಸಂಗಮೇಶ್ ಧರ್ಮಣ್ಣ ಎಚ್ ಧನ್ನಿ, ಕುಪೇಂದ್ರ ಶಾಸ್ತ್ರಿ ಕೃಷ್ಣಮೂರ್ತಿ, ಮಾಣಿಕ ರಾವ್ ನೇಳಗೆ, ಶಶಿಕಲಾ ಜಡೆ, ಸುಗುಲಾರಾಣಿ ಶಿವಕುಮಾರ್, ತಪಿತ ಮತ್ತಿತರರು ಮಾತನಾಡಿದರು ಅಭಿನಂದನೆ ಮಾತುಗಳ ನಾಡಿದ ಅನಿಲ್ ಕುಮಾರ್ ಅವರು ಆಕಾಶವಾಣಿಯಲ್ಲಿ ಸೇವೆ ತೃಪ್ತಿ ತಂದಿದೆ. ಆಕಾಶವಾಣಿಯಂತಹ ದೊಡ್ಡ ಸಂಸ್ಥೆಯಲ್ಲಿ ಸೇವಾ ಭಾಗ್ಯ ಸಿಕ್ಕಿರೋದು ಪುಣ್ಯ ಎಂದು ಹೇಳಿದರು ವಿನುತನ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ರಾಜ್ಯ ಪ್ರಶಸ್ತಿ ಲಭಿಸಲು ಕಾರಣವಾಗಿರೋದು ಕಲ್ಬುರ್ಗಿ ಆಕಾಶವಾಣಿ ಕೇಂದ್ರದಿಂದ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಮುಖ್ಯಸ್ಥರಾದ ಪ್ರಕಾಶ್ ಮುಜುಂದಾರ್, ಅಶೋಕ್ ಸೊನ್ಕವಡೆ ಮೊಹಮ್ಮದ್ ಅಬ್ದುಲ್ ರೌಫ್ , ಕುಮಾರ್ ಅಮರಗೊಳ್, ಅನುμÁ ಡಿ.ಕೆ, ಫೇಬಿ ಶೇಖರ್, ಅಮರೇಂದ್ರ, ಈಶ್ವರ ಪ್ರಸಾz,ï ಶಿವಪುತ್ರಪ್ಪ, ಸುರೇಶ್ ರಾಂಪುರೆ, ಶೇಷಗಿರಿ, ಶ್ರೀಮಂತ ನಾಲವಾರ, ಬಾಳಪ್ಪ, ನಾಮದೇವ ಮತ್ತು ಅವಿನಾಶ್ ಮತ್ತಿತರರು ಹಾಜರಿದ್ದರು