ಸೇವಾಲಾಲ ಮಹಾರಾಜರ ಸಂದೇಶ ಇಂದಿಗೂ ಪ್ರಸ್ತುತ:ಡಾ.ಉಮೇಶ ಜಾಧವ

ಚಿಂಚೋಳಿ,ನ.21:ತಾಲೂಕಿನ ಪತ್ತುನಾಯಕ ತಾಂಡದಲ್ಲಿ ಆಯೋಜಿಸಿದ್ದ ಜಗದಂಭಾ ದೇವಿ ಪೂಜೆ ಮತ್ತು ಅಭಿಷೇಕ ಕಾರ್ಯಕ್ರಮ ಹಾಗೂ ಸೇವಲಾಲ ಮಹಾರಾಜರ 34ನೇ ಜಾತ್ರ ಮಹೋತ್ಸವದ ಮತ್ತು ಪರಮಪೂಜ್ಯ ಸಂತ ಶ್ರೀ ಲಿಂಗೈಕ್ಯ ಡಾ ರಾಮರಾವ ಮಹಾರಾಜರ ಶ್ರದ್ಧಾಂಜಲಿ ಸಪರ್ಮಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಸದ ಡಾ. ಉಮೇಶ ಜಾಧವ ಅವರು, ಮಹಾತಪಸ್ವಿ ಸಂತ ಸೇವಾ ಲಾಲ ಮಹಾರಾಜರ ಆಚಾರ ವಿಚಾರಗಳು ಕೇವಲ ಬಂಜಾರ ಸಮುದಾಯಕ್ಕೆ ಸೀಮಿತವಾಗಿಲ್ಲ ಮನು ಕುಲದ ಉದ್ಧಾರದ ಸದಾಶಯ ಒಳಗೊಂಡಿವೆ ಎಂದರು.
ಸೇವಾಲಾಲ ಮಹಾರಾಜರ ಸಂದೇಶ ಇಂದಿಗೂ ಪ್ರಸ್ತುತ ಬಂಜಾರ ಸಮಾಜಕ್ಕೆ ಇತಿಹಾಸ ಬರೆದ ಸೇವಾಲಾಲ ಮಹಾರಾಜರ ಕುರಿತು 7 ಸಾವಿರ ವರ್ಷಗಳ ಇತಿಹಾಸವಿದೆ ನಮ್ಮ ಸಮಾಜ ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಇಚೇಗೆ ತಾನೇ ನಮ್ಮೆಲ್ಲರನ್ನು ಆಗಲಿದ ಅರಾಧ್ಯದೈವ ಸಂತ ಲಿಂಗೈಕ್ಯ ಶ್ರೀ ಡಾ!! ರಾಮರಾವ ಮಹಾಜರು ಸಮುದಾಯದ ಧರ್ಮಗುರುಗಳ ತತ್ವಾದರ್ಶಗಳನ್ನು ಹಾಗೂ ಸಮಾಜದ ಕಳಕಳಿಯನ್ನು ನಾವೆಲ್ಲರೂ ಮೈಗೊಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಚಿಂಚೋಳಿಯ ಎಪಿಎಂಸಿ ಅಧ್ಯಕ್ಷರಾದ ಅಶೋಕ ಪಡಶೆಟ್ಟಿ.ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಂಡರೆಡ್ಡಿ ಆಡಿಕಿ. ಬಿಜೆಪಿ ಪಕ್ಷದ ಯುವ ತಾಲೂಕ ಅಧ್ಯಕ್ಷರಾದ ಸತೀಶರೆಡ್ಡಿ. ಕಲಬುರಗಿ ಜೆಸ್ಕಾಂ ಮಾಜಿ ನಿರ್ದೇಶಕರಾದ ಶರಣರೆಡ್ಡಿ ಮೊಗಲಪನೋರ್.
ಚಿಂಚೋಳಿಯ ಪುರಸಭೆ ಸದಸ್ಯರಾದ ಭೀಮರಾವ ರಾಠೋಡ.ಮತ್ತು ತಾಂಡದ ನಾಯಕ, ಕಾರಬಾರಿ, ಮುಂತಾದವರಿದ್ದರು ಇದ್ದರು