ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ.27 ತಾಲೂಕಿನ ಮಾಲ್ವಿ ಜಲಾಶಯದ ಬಳಿ ಭಾನುವಾರ ಸೇವಾಲಾಲ್ ಭಾವಚಿತ್ರದ ಫ್ಲೆಕ್ಸಿಗೆ ಕಿಡಿಗೇಡಿಗಳು ಚಪ್ಪಲಿಗಳನ್ನು ಹಾಕುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಸಮುದಾಯದ ಮುಖಂಡರು ಪೊಲೀಸ್ ಠಾಣೆ ಎದುರು ಘಟನೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಂಜಾರ ಸಮಾಜದ ತಾಲೂಕ ಅಧ್ಯಕ್ಷ ಚಂದ್ರನಾಯಕ್ ಮಾತನಾಡಿ ನಮ್ಮ ಸಮುದಾಯದ ಆರಾಧ್ಯ ದೈವ ಸೇವಾಲಾಲ್ ಮಹಾರಾಜ ಗುರುಗಳಿಗೆ ಅವಮಾನ ಮಾಡಿದ್ದಾರೆ. ಇಂತಹ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಸಿಪಿಐ ಮಂಜಣ್ಣ ಮಾತನಾಡಿ ಕೆಲವು ಕಿಡಿಗೇಡಿಗಳಿಂದ ಇಂತಹ ಘಟನೆಗಳು ನಡೆಯುತ್ತವೆ. ಭಾವಚಿತ್ರಕ್ಕೆ ಅವಮಾನ ಮಾಡಿದ ಯಾರೇ ಆಗಿರಲಿ ಅವರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ದೂಪದಹಳ್ಳಿ ಶಿವಪ್ರಕಾಶ್ ಮಹಾರಾಜ ಸ್ವಾಮೀಜಿ,, ವಕೀಲ ಸುಭಾಷ್ ನಾಯಕ್ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವಿಚಂದ್ರ ನಾಯ್ಕ್, ಅಶೋಕ್ ಕುಮಾರ್, ರಾಹುಲ್ ನಾಯ್ಕ್ ಇತರರಿದ್ದರು