ಸೇವಾಲಾಲ್ ಭವನಗಳನ್ನು ನಮಗೂ ಕೊಡಿ: ಶಾಸಕ ಖಾಶೆಂಪುರ್

ಬೀದರ: ಮಾ.23:ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಮಂಜೂರು ಮಾಡಲಾದ ಸೇವಾಲಾಲ್ ಭವನಗಳನ್ನು ನಮಗೂ ಕೊಡಿ, ಕೇವಲ ಮಂತ್ರಿಗಳ ಕ್ಷೇತ್ರಕ್ಕೆ ಸಿಮಿತಗೊಳಿಸಿದರೆ ಹೇಗೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯಿಸಿದರು.
ನಗರದ ವಿಧಾನಸೌಧದಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದಿಂದ 2017-18ರಲ್ಲಿ 03, 2018-19 01 ಸೇವಾಲಾಲ್ ಭವನವನ್ನು ಮಂಜೂರು ಮಾಡಿದ್ದರು. ಆದರೇ, 2019-20ರಲ್ಲಿ 18 ಸೇವಾಲಾಲ್ ಭವನಗಳನನ್ನು ಮಂತ್ರಿಗಳ ಕ್ಷೇತ್ರವಾದ ಔರಾದ್ ಗೆ ನೀಡಿದ್ದಾರೆ. ಎಲ್ಲಾವನ್ನು ಅವರಿಗೆ ನೀಡಿದ್ದಿರಿ..? ನನ್ನ ಕ್ಷೇತ್ರದಲ್ಲಿ ಸಹ 18-20 ತಾಂಡಾಗಳಿವೆ. ನಮಗೂ ಸೇವಾಲಾಲ್ ಭವನಗಳನ್ನು ನೀಡಬೇಕು. ಎಲ್ಲಾ ತಮ್ಮ ತಮ್ಮ ಭಾಗಕ್ಕೆ ನೀಡಿದರೆ ಕಷ್ಟ ಆಗುತ್ತದೆ. ನಮ್ಮ ಭಾಗಕ್ಕೆ ಯಾಕ್ ಅವಕಾಶ ಕೊಡಲಿಲ್ಲ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಪ್ರಶ್ನಿಸಿದರು.