ಸೇವಾಲಾಲ್ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ


ಸಂಜೆವಾಣಿ ವಾರ್ತೆ
ಗಂಗಾವತಿ, ಸೆ.24: ತಾಲೂಕಿನ ಸಾಯಿನಗರ ಕಾರ್ಯಕ್ಷೇತ್ರದ ಸೂರ್ಯನಾಯಕನ ತಾಂಡಾದಲ್ಲಿ ಸೇವಾಲಾಲ್ ಜ್ಞಾನವಿಕಾಸ ಕೇಂದ್ರದ ಉದ್ಘಾಟನೆಯನ್ನು ಬಸಾಪಟ್ಟಣ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಅಚಿಜನೇಯ ನಾಯಕ ನೇರವರಿಸಿದರು.
ನಂತರ ಮಾತನಾಡಿ, ಶ್ರೀ ಧರ್ಮಸ್ಥಳ ಸಂಸ್ಥೆಯು ನೀಡುವ ಸಾಮಾಜಿಕ ಕೊಡುಗೆ ಅತ್ಯಂತ ಸಾರ್ಥಕವಾದದ್ದು ಇದರ ಸದುಪಯೋಗವನ್ನು ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು ಹಾಗೂ ಸಂಘದ ಹಣ ಸದ್ವಿನಿಯೋಗವಾಗಿ ಪ್ರತಿಮನೆಯಲ್ಲಿ ಸಂತೋಷ ನೆಮ್ಮದಿ ಮನೆಮಾಡಬೇಕು ಮತ್ತು ದುರುಪಯೋಗವಾಗುವುದನ್ನು ತಡೆಗಟ್ಟಬೇಕು ಎಂದರು. ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಪ್ರಾಸ್ತಾವಿಕವಾಗಿ  ಮಾತನಾಡಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಜ್ಞಾನವಿಕಾಸ ಕಾರ್ಯಕ್ರಮ ಬೆಳೆದು ಬಂದ ಬಗ್ಗೆ ಜ್ಞಾನವಿಕಾಸ ಕಾರ್ಯಕ್ರಮಗಳ ಮಹತ್ವ ಸದಸ್ಯರಿಗೆ ಮಾಹಿತಿ ತಿಳಿಸಿದರು. ಗ್ರಾಮ ಪಂಚಾಯತಿ ಅಭಿವೃಧ್ದಿ ಅಧಿಕಾರಿ ವಿದ್ಯಾವತಿ ಮಾತನಾಡಿ ಧರ್ಮಸ್ಥಳ ಸಂಸ್ಥೆಯ ಮತ್ತು ಸರಕಾರದ ಯೋಜನೆಗಳು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿಯಾದ ಲಲಿತ ಕಂದಗಲ್ ಆರೋಗ್ಯದ ಕುರಿತು ವಿಶೇಷವಾಗಿ ಆನಂದ ಮತ್ತು ಆರೋಗ್ಯಕರ ಬದುಕಿಗೆ ಧ್ಯಾನದ ಮಹತ್ವ ತುಂಬಿದೆ ನಿತ್ಯ ಧ್ಯಾನ ಮಾಡುವ ರೂಢಿಯಿಟ್ಟುಕೊಳ್ಳಬೇಕು ಎಂದರು.
ಸಿರಿಧಾನ್ಯಗಳ ಬಳಕೆಯಿಂದ ಆಗುವಂತಹ ಉಪಯೋಗಗಳು ಉಪಯೋಗಿಸುವ ಬಗೆ ಸಂಸ್ಕೃತಿ ಸಂಸ್ಕಾರದ ಬಗ್ಗೆ ಮಾಹಿತಿಯನ್ನು ಆಹಾರ ಸತ್ವಗಳ ತಜ್ಞರಾದ ಮಂಜುನಾಥ್ ಗುಡ್ಲಾನೂರ ಸಿರಿಧಾನ್ಯಗಳ ಬಳಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಡುವಂತ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಕನಕರಾಯ, ಹುಸೇನ್‍ಸಾಬ್, ಗೌರಮ್ಮ, ಊರಿನ ಗಣ್ಯರಾದ ಶಂಕರ್‍ನೈಕ್ , ದೇವಸ್ಥಾನದ ಅರ್ಚಕರಾದ ಹನುಮಂತಪ್ಪ  ಮೇಲ್ವಿಚಾರಕಿ ಜಯಲಕ್ಷ್ಮಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಾರದ, ಸೇವಾ ಪ್ರತಿನಿಧಿ ಹುಲಿಗೆಮ್ಮ ,ಜ್ಞಾನವಿಕಾಸ ಕೇಂದ್ರದ ಸದಸ್ಯರು, ಇತರರು ಉಪಸ್ಥಿತರಿದ್ದರು.