ಸೇವಾಲಾಲರ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಸಿ ಮನವಿ

ಲಕ್ಷ್ಮೇಶ್ವರ,ಸೆ.16: ಪಟ್ಟಣದಲ್ಲಿ ಗುರುವಾರ ಕರ್ನಾಟಕ ಪ್ರದೇಶ ಲಂಬಾಣಿ ಬಂಜಾರ ಶ್ರೀ ಸೇವಾಲಾಲ್ ಕಲ್ಯಾಣ ಸಂಘ ಹಾಗೂ ಯುವ ಘಟಕದ ವತಿಯಿಂದ ಸಂತ ಸೇವಾಲಾಲ್ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಆಗ್ರಹಿಸಿ ತಹಶೀಲ್ದಾರರಿಗೆ ಮತ್ತು ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕುಗಳ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಲಕ್ಷ್ಮೇಶ್ವರ ತಾಲೂಕ ಬಂಜಾರ ಸೇವಾಲಾಲ್ ಕಲ್ಯಾಣ ಸಂಘದ ಅಧ್ಯಕ್ಷರಾದ ದೀಪಕ್ ಲಮಾಣಿ ಅವರ ನೇತ್ರತ್ವದಲ್ಲಿ ಲಂಬಾಣಿ ಸಮಾಜದ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಹೊರಟು ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಪೆÇಲೀಸ್ ಠಾಣೆಯ ಎದುರುಗಡೆ ಇರುವ ಹರದಗಟ್ಟಿ ದೊಡ್ಡೂರು ಶಿಗ್ಲಿ ಗ್ರಾಮಗಳಿಗೆ ಸಂಪರ್ಕಿಸುವ ಮಾರ್ಗ ಮಧ್ಯದಲ್ಲಿ ಶ್ರೀ ಸಂತ ಸೇವಾಲಾಲ್ ವೃತ್ತ ವನ್ನಾಗಿ ಘೋಷಿಸಬೇಕು ಎಂದು ಮತ್ತು ಲಂಬಾಣಿ ಸಮಾಜ ಎಲ್ಲ ಧರ್ಮ ಜನಾಂಗದವರೊಂದಿಗೆ ಬೆರೆತು ಸೌಹಾರ್ದತೆಯಿಂದ ಬಾಳಿ ಬದುಕುತ್ತಿದ್ದು ಈ ಜನರ ಆರಾಧ್ಯ ದೈವ ಸಮಾಜದ ಕುಲಗುರುಗಳಾದ ಸಂತ ಸೇವಾಲಾಲರ ವೃತ್ತವನ್ನುಂದು ಘೋಷಿಸಬೇಕು ಎಂದು ದೀಪಕ ಲಮಾಣಿ ಹೇಳಿದರು.
ಮನವಿ ಪತ್ರ ಸ್ವೀಕರಿಸಿದ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರು ಮಾತನಾಡಿ, ಪುರಸಭೆಯ ಸಾಮಾನ್ಯ ಸಭೆಯಲ್ಲಿಟ್ಟು ಸರ್ಕಾರದ ನಿರ್ದೇಶನ ನಿಯಮಗಳಿಗನುಸಾರವಾಗಿ ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ಹೇಳಿದರು.
ಉಪಾಧ್ಯಕ್ಷೆ ಮಂಜವ್ವ ನಂದಣ್ಣನವರ, ರಾಮು ಗಣದವರ್, ಎಂಆರ್ ಪಾಟೀಲ್, ಸೋಮಣ್ಣ ಹರದಗಟ್ಟಿ, ಶೇಖಪ್ಪ ಲಮಾಣಿ, ನಾಗಪ್ಪ ಆದರಹಳ್ಳಿ, ಪರಮೇಶ ಲಮಾಣ, ಕಿರಣ ಲಮಾಣಿ, ಫಕೀರಪ್ಪ ಮಾಳಗಿಮನಿ, ದೇವಲಪ್ಪ ಅಕ್ಕಿಗುಂದ, ಬಾಬು ಲಮಾಣಿ, ಗಣೇಶ್ ದೊಡ್ಡೂರು, ಶಂಕ್ರಪ್ಪ ನಾಯಕ್, ತಿಮ್ಮಪ್ಪ ಲಮಾಣಿ, ಶೇಖಪ್ಪ ಲಮಾಣ, ಹನುಮಂತ ಅಡರಕಟ್ಟಿ, ಬಸವರಾಜ್ ಉಂಡೇನಹಳ್ಳಿ, ಭೀಮಪ್ಪ ಲಮಾಣಿ ಸೇರಿದಂತೆ ಅನೇಕರಿದ್ದರು.