ಸೇವಾದಳ ಕಚೇರಿಯಲ್ಲಿ ಬಸವಜಯಂತಿ ಆಚರಣೆ

ದಾವಣಗೆರೆ.ಏ.27; ಭಾರತ ಸೇವಾದಳ, ಫ್ಲೈಯಿಂಗ್ ಬರ್ಡ್ಸ್ ನೃತ್ಯ ಶಾಲೆ ಸಹಯೋಗದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ  ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು. ಜಿಲ್ಲಾ ಸೇವಾದಳ ಅಧ್ಯಕ್ಷ ಚನ್ನಪ್ಪ ಎಚ್ ಪಲ್ಲಗಟ್ಟೆ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಸವಣ್ಣನವರ ವಚನಗಳನ್ನು ಮಕ್ಕಳಿಗೆ ಹೇಳಿಕೊಟ್ಟರು. ನಿವೃತ್ತ ಪ್ರಾಂಶುಪಾಲ ಪರಶುರಾಮ್ ಖಾಟಾವ್ಕಾರ್ ಬಸವಣ್ಣನವರ ಕುರಿತು ಮಾತನಾಡಿದರು.  ಯೋಗ ಶಿಕ್ಷಕ ನಾಗ ಶಯನ, ಪರಮೇಶ್ವರಪ್ಪ ಉಪಸ್ಥಿತರಿದ್ದರು. ವಲಯ ಸಂಘಟಕ ಅಣ್ಣಪ್ಪ ಸ್ವಾಗತಿಸಿದರು, ಕೆ. ಪಿ. ಶ್ರೀಕಾಂತ್ ವಂದಿಸಿದರು.