ಸೇಬು, ಮಾವು ಮಾರಾಟ ಮಾಡುವ ಮೂಲಕ ವಾಟಾಳ್ ವಿಭಿನ್ನವಾಗಿ ಮತಯಾಚನೆ

ಚಾಮರಾಜನಗರ, ಮೇ.02- ತಳ್ಳುಗಾಡಿಯಲ್ಲಿ ಸೇಬು, ಮಾವು ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ವಿಭಿನ್ನವಾಗಿ ಮತಯಾಚನೆ ಮಾಡಿದರು.
ಕರ್ನಾಟಕದಲ್ಲಿ ವಿಭಿನ್ನ ಚಳವಳಿಗಳ ಮೂಲಕವೇ ಪ್ರಸಿದ್ಧರಾಗಿರುವ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಅವರು ಇಂದು ನಗರದ ಹಳೇ ಬಸ್‍ಸ್ಟ್ಯಾಂಡ್ ಬಳಿ ತಳ್ಳುಗಾಡಿಗಳಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದವರ ಬಳಿ ತೆರಳಿ ತಾವೇ ಖುದ್ದು ಕೂತು ಸೇಬು ಅರ್ಧ ಕೆಜಿ 100 ರೂ. ಎಂದು ಕೂಗಿ ಗ್ರಾಹಕರಿಗೆ ಸೇಬು, ಮಾವು, ಬಾಳೆಹಣ್ಣುಗಳನ್ನು ತೂಕ ಮಾಡಿ ವ್ಯಾಪಾರ ಮಾಡುವ ಮೂಲಕ ವಿಶಿಷ್ಠವಾಗಿ ಮತಯಾಚಿಸುವ ಮೂಲಕ ಗ್ರಾಹಕರನ್ನು ತಮಗೆ ಮತ ಹಾಕುವಂತೆ ವಿನಂತಿಸಿಕೊಂಡರು.
ಇದೇ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಸಣ್ಣಪುಟ್ಟ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದೇನೆ, ಇದರಿಂದ ಬಡ ಹಾಗೂ ಸಾಮಾನ್ಯ ಜನರಿಗೆ ಅನುಕೂಲವಾಗಿದ್ದೇನೆ. ನಾನು ಬಡವರ ಹಾಗೂ ಸಾಮಾನ್ಯ ಜನರ ಪರವಾಗಿ ಕೆಲಸ ಮಾಡಿದ್ದೇನೆ. ಹಲವಾರು ಗ್ರಾಮಗಳಲ್ಲಿ ಮನೆ ನಿರ್ಮಾಣ ಮಾಡಿದ್ದೇನೆ.
ಚಾಮರಾಜನಗರದಲ್ಲಿ ಕಳೆದ 15 ವರ್ಷದಿಂದ ಯಾವುದೇ ಅಭಿವೃದ್ಧಿಪಡಿಸಿರುವುದಿಲ್ಲ. ಈ ಭಾಗದ ಶಾಸಕರು ಕಳೆದ 15 ವರ್ಷಗಳಲ್ಲಿ ಶಾಸನಸಭೆಯಲ್ಲಿ ಎಷ್ಟು ಬಾರಿ ಮಾತನಾಡಿದ್ದೀರಿ ಎಂದು ಸವಾಲು ಹಾಡಿದರು.
ಜಿಲ್ಲೆ ಮಾಡಿದ್ದು ನಾನು, ರಾಹುಲ್ ಗಾಂಧಿ ಅಲ್ಲ:
ಚಾಮರಾಜನಗರಕ್ಕೆ ರಾಹುಲ್ ಗಾಂಧಿ ಭೇಟಿ ನೀಡುವ ಕುರಿತು ವಾಟಾಳ್ ನಾಗರಾಜ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಮಾಡಿದ್ದು ನಾನು- ರಾಹುಲ್ ಗಾಂಧಿ ಅಲ್ಲ, ರಸ್ತೆ ಮಾಡಿದ್ದು ನಾನು, ಕುಡಿಯುವ ನೀರು ಕೊಟ್ಟಿದ್ದು ನಾನು, ಬಿಜೆಪಿ-ಕಾಂಗ್ರೆಸ್ ನವರಲ್ಲ, ನೀರು ಕುಡಿಯುವ ಋಣಕ್ಕಾದರೂ ಜನರು ನನಗೊಂದು ಮತ ಕೊಡಬೇಕು, ನನ್ನನ್ನು ಸೋಲಿಸಿದರೇ ನನ್ನ ಹಾಗೂ ಚಾಮರಾಜನಗರ ಬಾಂಧವ್ಯ ಕೊನೆಯಾಗಲಿದೆ ಎಂದರು.
ಮತಎಂಬುದುಖರೀದಿ ಮಾಡಲು ಹಣ್ಣು, ತರಕಾರಿಅಲ್ಲ, ಜನರುತಮ್ಮ ಮತವನ್ನು ಹಣಕ್ಕೆ, ಜಾತಿಗೆ ಮಾರಿಕೊಳ್ಳಬಾರದು, ಚಾಮರಾಜನಗರದಲ್ಲಿ ಬಿಜೆಪಿ, ಕಾಂಗ್ರೆಸ್ ಸೋಲಬೇಕು, ವಾಟಾಳ್ ನಾಗರಾಜ್‍ಗೆಲ್ಲಬೇಕು, ಕಳೆದ 15 ವರ್ಷಗಳಿಂದ ಆಯ್ಕೆಯಾಗುತ್ತಿರುವ ಕೈ ಶಾಸಕ ಶಾಸನಸಭೆಯಲ್ಲಿ ಏನು ಮಾತನಾಡಿದ್ದಾರೆಂದುಕಿಡಿಕಾರಿದರು.
ಕಾಂಗ್ರೆಸ್ ಹಾಗೂ ಬಿಜೆಪಿಯವರುಜನರನ್ನು ಹಣ, ಜಾತಿ, ಹೆಂಡದ ಮೂಲಕ ಮರಳು ಮಾಡಿಚಾಮರಾಜನಗರಕ್ಷೇತ್ರವನ್ನು ಹಾಳು ಮಾಡುತ್ತಿದ್ದಾರೆ. ಜನರುಇವರಯಾವುದೇ ಆಮಿಷಗಳಿಗೆ ಒಳಗಾಗದೇ ನನಗೆ ಮತನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಹುಂಡಿ ಬಸವಣ್ಣ, ಬಸಪ್ಪನಪಾಳ್ಯ ಕುಮಾರ, ಗೋಪಾಲನಾಯ್ಕ, ವರದನಾಯ್ಕ, ವಡ್ಡರಹಳ್ಳಿ, ಪಣ್ಯದಹುಂಡಿರಾಜು, ಚಾ.ರಂ. ಶ್ರೀನಿವಾಸಗೌಡ, ಸಂಜು, ರಾವತ್, ಶಿವಲಿಂಗಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.