ಸೇಫ್ ಸಿಟಿ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿಲ್ಲ

ಬೆಂಗಳೂರು,ಡಿ.೨೭- ನಗರದ ಸುರಕ್ಷತೆ ಸಲುವಾಗಿ ಸಿಸಿಟಿವಿ ಅಳವಡಿಸುವ ೬೧೯ ಕೋಟಿ ರೂ. ಮೊತ್ತದ ನಿರ್ಭಯಾ ಹೆಸರಿನ ಸೇಫ್ ಸಿಟಿ ಗುತ್ತಿಗೆ ವಿಚಾರದಲ್ಲಿ ಕಾನೂನು ಬಾಹಿರವಾಗಿ ತಾವು ಕೆಲಸ ಮಾಡಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಹೇಮಂತ್ ನಿಂಬಾಳ್ಕರ್ ಅವರು ಸ್ಪಷ್ಟಪಡಿಸಿದ್ದಾರೆ.
ಟೆಂಡರ್ ಪ್ರಾಧಿಕಾರಿಯೂ ಆಗಿರುವ ಹೇಮಂತ್ ನಿಂಬಾಳ್ಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಿರ್ಭಯಾ ಹೆಸರಿನ ಸೇಫ್ ಸಿಟಿ ಯೋಜನೆಯ ಬಗ್ಗೆ ಸರ್ಕಾರದ ಹಂತದಲ್ಲಿ ಕುರಿತು ಮೂರು ಹಂತಗಳಲ್ಲಿ ವಿವಿಧ ಇಲಾಖೆಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಅದರ ಮೇಲೆ ಅಪೆಕ್ಸ್ ಸಮಿತಿ ಇರಲಿದ್ದು, ಎಲ್ಲವೂ ಪಾರದರ್ಶಕವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯೋಜನೆ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಊಹೆಗಳು ಹರಿದಾಡುತ್ತಿದ್ದು, ಕಳೆದ ಜೂನ್‌ನಲ್ಲಿ ಈ ಪ್ರಕ್ರಿಯೆ ನಡೆದಿದ್ದು ಮ್ಯಾಟ್ರಿಕ್ಸ್ ಕಂಪೆನಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿ ಸೇರಿ ಮೂವರು ಕಂಪನಿಗಳು ಟೆಂಡರ್ ಪಡೆಯಲು ಮುಂದಾಗಿದ್ದವು.
ಈ ಮೂರು ಕಂಪೆನಿ ಚೀನಾದ ವಸ್ತುಗಳನ್ನು ಬಳಸುವಂತಿಲ್ಲ ಎಂಬ ಕೇಂದ್ರ ಸರ್ಕಾರದ ಆದೇಶ ಮೇರೆಗೆ ಮೂರು ಕಂಪೆನಿಗಳು ಟೆಂಡರ್ ನಿಂದ ಹಿಂದೆ ಸರಿದಿದ್ದವು ಎಂದರು.
ಮೂರು ಕಂಪೆನಿಗಳು ಯೋಜನೆಯ ಪರಿಶೀಲನೆಗೆ ಮುನ್ನವೇ ರಿಜೆಕ್ಟ್ ಆಗಿದ್ದವು ಭಾರತ್ ಎಲೆಕ್ಟ್ರಾನಿಕ್ಸ್ ಲಿ. ಕಾಲ್ ಒನ್ ನಲ್ಲಿ ಟೆಂಡರ್ ಹಾಕಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮತ್ತೆ ನವೆಂಬರ್ ನಲ್ಲಿ ಬಿಡ್ ಮಾಡಲಾಗಿದ್ದು
ಅದು ಚಾಲ್ತಿಯಲ್ಲಿದ್ದು ಎಂಟನೇ ತಾರೀಖಿನವರೆಗೂ ಅದು ಚಾಲ್ತಿಯಲ್ಲಿ ಇರುತ್ತದೆ ಯಾರು ಬೇಕಾದರೂ ಬಿಡ್ ಮಾಡಬಹುದು ಎಂದು ಹೇಳಲಾಗಿತ್ತು ಎಂದರು
ಐಎಂಎ ವಿಚಾರದಲ್ಲಿ ನನ್ನ ಮೇಲಿನ ಆರೋಪ ವಿಚಾರ ಕುರಿತು ನ್ಯಾಯಾಲಯದ ಮುಂದೆ ಇರುವುದರಿಂದ ಈ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್ ಪ್ರಕ್ರಿಯೆಯಲ್ಲಿ ರೂಪಾ ಅವರ ಹೆಸರನ್ನು ಪ್ರಸ್ತಾಪಿಸಿದೇ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡಂತೆ ಎಂದು ವ್ಯಂಗ್ಯ ವಾಡಿದರು.
ಈಗಾಗಲೇ ನಾನು ಬರೆದ ಪತ್ರ ಪರಿಗಣಿಸಿ ಈಗಾಗಲೇ ಸಮಿತಿ ರಚನೆ ಆಗಿದೆ ಹೀಗಾಗಿ ನಾನು ಆ ವಿಚಾರ ಮಾತಾಡಲ್ಲ ವೈಯಕ್ತಿಕ ದ್ವೇಷಗಳಿಗೆ ನಾನು ಉತ್ತರ ಕೊಡುವುದು ಸಮಂಜಸವಲ್ಲ ಎಂದರು.
ಜಟಾಪಟಿ:
ಯೋಜನೆಯ ಟೆಂಡರ್ ವಿಚಾರವಾದಿ ಆಯುಕ್ತ ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಮಧ್ಯೆ ಜಟಾಪಟಿ ಶುರುವಾಗಿತ್ತು.
ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್ ಪ್ರಕ್ರಿಯೆಯಲ್ಲಿ ಡಿ. ರೂಪಾ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಹೇಮಂತ್ ನಿಂಬಾಳ್ಕರ್, ಮುಖ್ಯ ಕಾರ್ಯದರ್ಶಿ ಅವರಿಗೆ ಡಿ. ೭ರಂದು ಪತ್ರ ಬರೆದಿದ್ದರು
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ. ರೂಪಾ ಅವರು, ‘ಸರ್ಕಾರದ ಹಣ ಉಳಿಸಲು ಯತ್ನಿಸಿದ್ದಕ್ಕೆ ದುಷ್ಟರ ಕೂಟ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಜನರ ಹಿತಾಸಕ್ತಿ ಹಾಗೂ ಅವರಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಯೋಜನೆ ಸಂಬಂಧ ಈ ಅಂಡ್ ವೈ ಕಂಪನಿಗೆ ದಾಖಲೆಗಳ ಸಿದ್ಧಪಡಿಸಲು ಎರಡನೇ ಬಾರಿಗೆ ಗುತ್ತಿಗೆ ನೀಡಲಾಯಿತು. ನಾನು ಗೃಹ ಕಾರ್ಯದರ್ಶಿ ಆಗಿರುವ ಕಾರಣ ಆ ಗುತ್ತಿಗೆ ಸಂಬಂಧಿಸಿದ ಕಡತ ನನ್ನ ಪರಿಶೀಲನೆಗೆ ಬಂದಿತು. ನಾನು ಯಾರ ಮೇಲೂ ಒತ್ತಡ ತಂಡು ಕಡತ ತರಿಸಿಕೊಂಡಿಲ್ಲ.
ನಿಂಬಾಳ್ಕರ್ ಮೇಲೆ ಕ್ರಮ:
ಆಗ ನಾನು ಆ ಕಂಪನಿ ಅಧಿಕಾರಿಗೆ ಕರೆ ಮಾಡಿ ವಿವರ ಕೇಳಿದ್ದು ನಿಜ. ಇಲ್ಲಿ ಚರ್ಚೆ ಆಗಬೇಕಿರುವುದು ಯಾಕೆ ಮೊದಲ ಬಾರಿಗೆ ಟೆಂಡರ್ ರದ್ದುಪಡಿಸಲಾಯಿತು. ಮತ್ತು ಆ ಟೆಂಡರ್ ಕಮಿಟಿ ಅಧ್ಯಕ್ಷರಾದ ನಿಂಬಾಳ್ಕರ್ ಯಾಕೆ ನ್ಯಾಯ ಸಮ್ಮತವಲ್ಲದ ಕೆಲಸ ಮಾಡಿದ್ದಾರೆನ್ನುವುದು. ಕೂಡಲೇ ನಿಂಬಾಳ್ಕರ್ ನ್ನು ಆ ಹುದ್ದೆಯಿಂದ ತೆಗೆದು ಹಾಕಬೇಕು. ಸರ್ಕಾರದ ಹಣ ಉಳಿಸಲೆತ್ನಿಸಿದ್ದಕ್ಕೆ ನನ್ನ ವಿರುದ್ಧ ಆ ದುಷ್ಟಕೂಟ ಅಪಪ್ರಚಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನಿಖಾಧಿಕಾರಿ ನೇಮಕ:
ಖಾಸಗಿ ಕಂಪನಿಯಿಂದ ಟೆಂಡರ್ ಮಾಹಿತಿ ಕೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ನಗರ ಪೊಲೀಸ್ ಆಯುಕ್ತರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಕೂಲಂಕಷ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದೆ.