ಸೇನೆ ಪೊಂಗಲ್ ಆಚರಣೆ

ಲಡಾಖ್,ಜ.೧೫-ಕೊರೆಯುವ ಚಳಿಯಲ್ಲೂ ದೇಶ ಕಾಯುತ್ತಿರುವ ಸೈನಿಕರು ಹಿಮಾಚ್ಛಾದಿತ ಪ್ರದೇಶದಲ್ಲಿ ಪೊಂಗಲ್ ಸಂಭ್ರಮಾಚರಣೆ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ.
ಲಡಾಖ್ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾರ್ಗಿಲ್‌ನಲ್ಲಿ ಭಾರತೀಯ ಸೈನಿಕರು ಸಂಭ್ರಮದಿಂದ ಪೊಂಗಲ್ ಹಬ್ಬ ಆಚರಿಸಿದ್ದಾರೆ. ಜತೆಗೆ ದೇಶದ ಜನರಿಗೂ ಅವರು ಶುಭ ಕೋರಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಸೈನಿಕರಿಗೆ ಧನ್ಯವಾದ ಸಲ್ಲಿಸಿ, ಶುಭಾಶಯ ಕೋರಿದ್ದಾರೆ.