ಸೇನೆಯಿಂದ ಮರಳಿದ ಯೋಧನಿಗೆ ಅದ್ದೂರಿ ಸ್ವಾಗತ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ,ಜೂ,7- ಭಾರತದ ಸೇನೆಯಲ್ಲಿ 23 ವರ್ಷ ಸುದೀರ್ಘ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಸ್ವಗ್ರಾಮ ತಾಲೂಕಿನ ಅಂಗೂರು ಗ್ರಾಮಕ್ಕೆ ವಾಪಾಸ್ಸಾದ ಯೋಧ ಗಂಜಿ ಪರಶುರಾಮ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.
ಗ್ರಾಮದ ಪ್ರಮುಖ ಬೀದಿಯಲ್ಲಿ ಯೋಧನನ್ನು ತೆರೆದು ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಆಂಜನೇಯ ಬಯಲು ವೇದಿಕೆಯಲ್ಲಿ ಅಂಗೂರೇಶ್ವರ ಗೆಳೆಯರ ಬಳಗದವರು ಅಭಿನಂದನಾ ಕಾರ್ಯಕ್ರಮ ನಡೆಸಿದರು.
ಶಿವಯೋಗೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ದೇಶದ ಸೇನೆಯಲ್ಲಿ ಎರಡು ದಶಕ ಕಾಲ ಸೇವೆ ಸಲ್ಲಿಸಿ ಗ್ರಾಮಕ್ಕೆ ವಾಪಾಸಾಗಿರುವುದು ನಮಗೆಲ್ಲ ಬಹಳ ಸಂತೋಷವಾಗಿದೆ. ಅನ್ನ ನೀಡುವ ರೈತ, ದೇಶ ರಕ್ಷಿಸುವ ಸೈನಿಕರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಚಂದ್ರಶೇಖರ ಕಲಾ ಬಳಗದ ಕಾರ್ಯದರ್ಶಿ ಕೆ.ಸಿ.ಪರಶುರಾಮ ಅಂಗೂರು ಅವರು ಯೋಧನನ್ನು ಗೌರವಿಸಿದರು. ಪಿ.ಎನ್.ಫಕೀರೇಶ ದೊಡ್ಡಮನಿ, ಡಿ.ಬಲವಂತ, ಆದಿಮನಿ ಯಲ್ಲಪ್ಪ, ಮುರಳಿ, ಪರಶುರಾಮ, ಮುರುಗೇಶ, ಕೊಟ್ರೇಶ, ನಿವೃತ್ತ ಸೈನಿಕ ಮಕರಬ್ಬಿ ತಿರುಪತಿ ಉಪಸ್ಥಿತರಿದ್ದರು.

One attachment • Scanned by Gmail