ಸೇನೆಗೆ ಕೊಡುಗೆ ಇಮ್ರಾನ್ ನಿರಾಕರಣೆ

ಲಾಹೋರ್/ಇಸ್ಲಾಮಾಬಾದ್,ಅ.೨೯-ಪಾಕಿಸ್ತಾನ ಸೇನೆಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ’ಲಾಭದಾಯಕ ಕೊಡುಗೆ’ ನೀಡಿದ್ದಾರೆ ಎಂದು ಐಎಸ್‌ಐ ಮುಖ್ಯಸ್ಥರ ಹೇಳಿಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ಇಮ್ರಾನ್ ಖಾನ್, ದೇಶ ಮತ್ತು ಸರ್ಕಾರದ ಸಂಸ್ಥೆಗಳಿಗೆ “ಹಾನಿ” ಮಾಡಲು ಬಯಸುವುದಿಲ್ಲ.ಹೀಗಾಗಿ “ಮೌನ” ವಹಿಸುವುದಾಗಿ ತಿಳಿಸಿದ್ಧಾರೆ.

ಈ ವರ್ಷದ ಮಾರ್ಚ್‌ನಲ್ಲಿ ನಡೆದ ರಾಜಕೀಯ ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ತನ್ನ ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರಿಗೆ ಕೊಡುಗೆ ನೀಡಿದ್ದಾರೆ ಎನ್ನುವ ಆರೋಪ ಇಮ್ರಾನ್ ಖಾನ್ ಮೇಲೆ ಕೇಳಿ ಬಂದಿದೆ.

ಲಾಹೋರ್‍ನ ಪ್ರಸಿದ್ಧ ಲಿಬರ್ಟಿ ಚೌಕ್‌ನಲ್ಲಿ ತಮ್ಮ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥರೂ ಆಗಿರುವ ಇಮ್ರಾನ್ ಖಾನ್, ತಮ್ಮ ಮೆರವಣಿಗೆ ರಾಜಕೀಯ ಅಥವಾ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ, ಆದರೆ ನಿಜವಾದ ಸ್ವಾತಂತ್ರ್ಯ ಪಡೆಯಲು ಮತ್ತು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಎಂದು ಖಚಿತಪಡಿಸಿದ್ದಾರೆ.

ಕೆಲವು ವಿದೇಶಿ ಕಪಿಮುಷ್ಠಿಯಿಂದ “ನನ್ನ ರಾಷ್ಟ್ರವನ್ನು ಮುಕ್ತಗೊಳಿಸುವುದು ಮತ್ತು ಪಾಕಿಸ್ತಾನವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡುವುದು ನನ್ನ ಏಕೈಕ ಗುರಿಯಾಗಿದೆ” ಎಂದು ಪರೋಕ್ಷವಾಗಿ ಅಮೇರಿಕಾ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ನದೀಮ್ ಅಹ್ಮದ್ ಅಂಜುಮ್ ಅವರ ಆರೋಪಗಳನ್ನು ಇಮ್ರಾನ್ ಖಾನ್ ಇದೇ ವೇಳೆ ತಿರಸ್ಕರಿಸಿದ್ದು ಏಕಪಕ್ಷೀಯವಾಗಿದೆ ಮತ್ತು ಅವರು ಕೇವಲ “ಇಮಾನ್ ಖಾನ್ ಬಗ್ಗೆ ಮಾತನಾಡಿದ್ದಾರೆ” ಮತ್ತು ಸರ್ಕಾರದಲ್ಲಿರುವ “ಕಳ್ಳರ” ವಿರುದ್ಧ ಒಂದು ಮಾತನ್ನೂ ಹೇಳಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.